×
Ad

ಜೂನ್ 1ರಿಂದ ಉಚಿತ ತಂಬಾಕು ವ್ಯಸನ ನಿವಾರಣಾ ಶಿಬಿರ

Update: 2026-05-30 21:07 IST

ಉಡುಪಿ: ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಯಲ್ಲಿ ಜೂನ್ 1ರಿಂದ ಜೂನ್ 6ರವರೆಗೆ ಉಚಿತ ತಂಬಾಕು ವ್ಯಸನ ನಿವಾರಣಾ ಹೊರರೋಗಿ ಶಿಬಿರವನ್ನು ಆಯೋಜಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಜರ್ದಾ, ಸಿಗರೇಟ್, ಗುಟ್ಕಾ, ನಶ್ಯ ಪುಡಿ, ಎಲೆ ಅಡಿಕೆ ತಂಬಾಕು, ಬೀಡಿ, ಹುಕ್ಕಾ ಹಾಗೂ ಪಾನ್ ಮಸಾಲಾ ಸೇವನೆಯಂತಹ ತಂಬಾಕು ವ್ಯಸನಗಳಿಂದ ಮುಕ್ತರಾಗಲು ಬಯಸುವವರಿಗೆ ಉಚಿತ ಸಲಹೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ತಂಬಾಕು ಸೇವನೆಯನ್ನು ತ್ಯಜಿಸುವ ಸಂದರ್ಭದಲ್ಲಿ ಮನಸ್ಸಿಗೆ ಕಿರಿಕಿರಿ, ಆತಂಕ, ಅಸಹನೆ, ನಿದ್ರಾಹೀನತೆ, ಏಕಾಗ್ರ ತೆಯ ಕೊರತೆ, ಹಸಿವು ಹೆಚ್ಚಾಗುವುದು, ತಲೆನೋವು ಸೇರಿದಂತೆ ವಿವಿಧ ಹಿಂತೆಗೆತ ಲಕ್ಷಣಗಳು ಕಂಡುಬರಬ ಹುದು. ಆದರೆ ಸರಿಯಾದ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ನಿರಂತರ ಬೆಂಬಲದ ಮೂಲಕ ಈ ವ್ಯಸನದಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವೆಂದು ತಜ್ಞರು ತಿಳಿಸಿದ್ದಾರೆ.

ಶಿಬಿರದಲ್ಲಿ ತಜ್ಞ ವೈದ್ಯರ ಸಲಹೆ, ಮನೋವೈದ್ಯಕೀಯ ಮಾರ್ಗದರ್ಶನ, ವ್ಯಸನ ನಿವಾರಣಾ ಕೌನ್ಸೆಲಿಂಗ್, ಆರೋಗ್ಯ ತಪಾಸಣೆ, ಕುಟುಂಬ ಸದಸ್ಯರಿಗೆ ಜಾಗೃತಿ ಮಾಹಿತಿ, ಪ್ರೇರಣಾತ್ಮಕ ಮಾರ್ಗದರ್ಶನವನ್ನು ನೀಡಲಾಗು ವುದು. ಇದಲ್ಲದೆ ಆಸ್ಪತ್ರೆಯಲ್ಲಿ ಮಾನಸಿಕ ಕಾಯಿಲೆಗಳು ಹಾಗೂ ಸಾರಾಯಿ, ತಂಬಾಕು, ಗಾಂಜಾ ಸೇರಿದಂತೆ ವಿವಿಧ ಅಮಲು ಪದಾರ್ಥಗಳ ವ್ಯಸನ ವಿಮುಕ್ತಿ ಚಿಕಿತ್ಸೆಗೆ ಉಚಿತ ಸೌಲಭ್ಯವೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 92428 21515 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News