×
Ad

ಕೆಮ್ಮಣ್ಣು: ಪುಣ್ಯಸ್ಮರಣೆ- ರಕ್ತದಾನ ಶಿಬಿರ

Update: 2026-05-31 20:24 IST

ಉಡುಪಿ, ಮೇ 31: ನಿತ್ಯಾನಂದ ಅಭಿಮಾನಿ ಬಳಗ, ಗ್ರಾಮೀಣ ಕಾಂಗ್ರೆಸ್ ಕೆಮ್ಮಣ್ಣು, ಐಸಿವೈಎಂ ಕೆಮ್ಮಣ್ಣು, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ, ಶ್ರೀಗಜಾನನ ಬಿಲ್ಲವರ ಸೇವಾ ಸಂಘ ಹೂಡೆ, ತೋನ್ಸೆ ಫ್ರೆಂಡ್ಸ್ ಹಾಗು ಉಡುಪಿ ಜಿಲ್ಲಾ ಸರಕಾರಿ ರಕ್ತನಿಧಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಿತ್ಯಾನಂದ ಕೆಮ್ಮಣ್ಣು ಅವರ 5ನೇ ವರ್ಷದ ಪುಣ್ಯ ಸ್ಮರಣೆ ಹಾಗು ರಕ್ತದಾನ ಶಿಬಿರವನ್ನು ಕೆಮ್ಮಣ್ಣು ಲಿಟಲ್ ಫ್ಲವರ್ ಹಾಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಕೆಮ್ಮಣ್ಣು ಚರ್ಚ್‌ನ ಧರ್ಮಗುರುಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕೆಪಿಸಿಸಿ ವಕ್ತಾರ ವೆರೋನಿಕಾ ಕಾರ್ನೆಲಿಯೋ, ಗ್ರಾಮೀಣ ಕಾಂಗೇಸ್ ಅಧ್ಯಕ್ಷ ರಘುರಾಮ್ ಶೆಟ್ಟಿ, ಜನಾರ್ದನ ತೋನ್ಸೆ, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ, ಕುಮಾರ್ ಸುವರ್ಣ, ಪ್ರಖ್ಯಾತ ಶೆಟ್ಟಿ, ಅಮೃತ್ ಶೆಣೈ, ಕೀರ್ತಿ ಶೆಟ್ಟಿ, ರಮೇಶ್ ಕರ್ಕೇರ, ಉದಯ ಆಚಾರ್ಯ, ಪ್ರಶಾಂತ್ ಸುವರ್ಣ, ಸೂರ್ಯ ಸಾಲ್ಯಾನ್, ವಸಂತ್, ಯಶೋಧ, ಮಹೇಶ್, ಆಶಾ ಚಂದ್ರಶೇಖರ್, ಸುಂರ್ದ ಶೆಟ್ಟಿ,, ಓಂ ಪ್ರಕಾಶ್, ಗುರುರಾಜ್ ಭಟ್, ನೋಯೆಲ್ ಲೋಬೊ ಉಪಸ್ಥಿತರಿದ್ದರು.

ರೋಹಿತಾಕ್ಷ, ರತನ್ ಸುವರ್ಣ, ಜಾಯ್ಸ್ಟನ್ ಡಿಸೋಜ, ಆಸಿಫ್ ಹೂಡೆ, ಡಾ.ವೀಣಾ ಸಹಕರಿಸಿದರು. ಇಲಿಯಾಸ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News