×
Ad

ಜೂ.2ರಂದು ಕೋಟ ಪಡುಕರೆ ಕಾಲೇಜಿನಲ್ಲಿ ಉದ್ಯೋಗ ಮೇಳ

Update: 2026-05-31 20:34 IST

ಕೋಟ, ಮೇ 31: ಕೋಟ-ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಗೀತಾನಂದ ಫೌಂಡೇಶನ್ ಮಣೂರು- ಪಡುಕೆರೆ ಇವರ ಸಹಭಾಗಿತ್ವದಲ್ಲಿ ಉದ್ಯೋಗ ಮೇಳವನ್ನು ಜೂ.2ರಂದು ಬೆಳಗ್ಗೆ 9ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ಥಳೀಯ ಕಂಪನಿಗಳು ಆಗಮಿಸುತ್ತಿದ್ದು, ಎಸೆಸೆಲ್ಸಿ, ಪಿಯುಸಿ, ಎನ್‌ಟಿಸಿ, ಡಿಎಡ್, ಬಿಪಿಎಡ್, ಬಿಎಡ್, ಬಿಎ, ಬಿಕಾಂ, ಬಿಎಸ್‌ಡಬ್ಲ್ಯು, ಎಂಎಸ್‌ಡಬ್ಲ್ಯು, ಎಂಎ, ಎಂಕಾಂ, ಎಂಎಸ್ಸಿ, ಎಂಬಿಎ, ಬಿಬಿಎ, ಬಿಸಿಎ, ಬಿಟೆಕ್, ಎಂಟೆಕ್ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಪ್ರಸ್ತುತ ಅಂತಿಮ ಪದವಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯರ್ಥಿಗಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬಹುದು.

ಸಂರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ರೆಸ್ಯುಮ್, ಅಂಕಪಟ್ಟಿ, ಆಧಾರ್‌ಕಾರ್ಡ್, ಪ್ಯಾನ್ ಕಾರ್ಡ್‌ಗಳ ಮೂಲ ಪ್ರತಿಯೊಂದಿಗೆ ಹಾಜರಾಗ ಬೇಕು. ಈ ಉದ್ಯೋಗ ಮೇಳದ ಪ್ರಯೋಜನವನ್ನು ರಾಜ್ಯದ ಎಲ್ಲಾ ಉದ್ಯೋಗಾ ಕಾಂಕ್ಷಿಗಳು ಪಡೆದುಕೊಳ್ಳುವಂತೆ ಕಾಲೇಜಿನ ಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News