ವೃದ್ಧೆಯ ವಾರಸುದಾರರಿಗೆ ಸೂಚನೆ
Update: 2026-06-23 22:15 IST
ಉಡುಪಿ, ಜೂ.23: ಆದಿಉಡುಪಿ ಪರಿಸರದಲ್ಲಿ ಅಸಹಾಯಕರಾಗಿ ಅಲೆದಾಡುತ್ತಿದ್ದ ಮೂಲತಃ ತೆಲಂಗಾಣ ರಾಜ್ಯದ ನಗರಂಕಾರ್ಲಿ ತಾಲೂಕು ಪಾಲಿಚ ನಿವಾಸಿ ರಂಗಮ್ಮ (62) ಎಂಬ ವೃದ್ಧೆಯನ್ನು ರಕ್ಷಿಸಿ, ತಾತ್ಕಾಲಿಕ ಆಶ್ರಯಕ್ಕಾಗಿ ಹೊಸಬೆಳಕು ವೃದ್ಧಾಶ್ರಮ, ರಂಗನಪಾಲ್ಕೆಗೆ ದಾಖಲಿಸಿದೆ.
ವೃದ್ಧರ ಸಂಬಂಧಿಕರು ಯಾರಾದರೂ ಇದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ: 1090 ಅಥವಾ ದೂ.ಸಂಖ್ಯೆ: 0820-2526394 ಅನ್ನು ಸಂಪರ್ಕಿಸಬಹುದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರ ಪ್ರಕಟಣೆ ತಿಳಿಸಿದೆ.