ಬಾವಿಗೆ ಬಿದ್ದು ಕೃಷಿಕ ಮೃತ್ಯು
Update: 2026-07-05 20:44 IST
ಶಂಕರನಾರಾಯಣ, ಜು.5: ಬಾವಿಗೆ ಅಳವಡಿಸಿದ ಮೋಟಾರ್ ಪಂಪನ್ನು ಮೇಲಕ್ಕೆ ಎತ್ತುವ ವೇಳೆ ಕೃಷಿಯೊಬ್ಬರು ಅಕಸ್ಮಿಕವಾಗಿ ಬಾವಿ ಬಿದ್ದು ಮೃತಪಟ್ಟ ಘಟನೆ ಜು.4ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಅಲ್ಬಾಡಿ ಗ್ರಾಮದ ಲಕ್ಮಣ ನಾಯ್ಕ್(61) ಎಂದು ಗುರುತಿಸಲಾಗಿದೆ. ಇವರು ಮಳೆಯ ಕಾರಣದಿಂದ ಬಾವಿಯ ನೀರು ಮೇಲಕ್ಕೆ ಬಂದಿರುವುದನ್ನು ಕಂಡು ಬಾವಿಗೆ ಅಳವಡಿಸಿದ ಮೋಟಾರ್ ಪಂಪ್ ಸೆಟ್ಟನ್ನು ಮೇಲಕ್ಕೆ ಎತ್ತಲು ಹೋಗಿದ್ದು, ಈ ವೇಳೆ ಅವರು ಅಕಸ್ಮಿಕವಾಗಿ ಬಾವಿಯ ನೀರಿಗೆ ಬಿದ್ದು ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.