ಬಂಟಕಲ್ಲು: ರೋಟರಿಯಿಂದ ಆಟಿದ ನೆಂಪು ಕಾರ್ಯಕ್ರಮ
ಶಿರ್ವ, ಆ.10: ತುಳು ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ತುಳು ನಾಡಿನ ಆಚರಣೆಗಳು ಅನುಕರಣೆಗಳು ಭಿನ್ನವಾಗಿವೆ. ಹಿಂದೆ ಅಟಿ ತಿಂಗಳು ತುಂಬಾ ಬಡತನ, ಕಷ್ಟದ ತಿಂಗಳು. ಮಳೆಗಾಲದಲ್ಲಿ ಪ್ರಕೃತಿಯಲ್ಲಿರುವ ಎಲೆ, ಗೆಡ್ಡೆ ಮುಂತಾದ ಪದಾರ್ಥಗಳನ್ನು ಅಹಾರವಾಗಿ ಸೇವಿಸಿ ಜೀವಿಸಿದ ಕಾಲ. ಆಟಿ ಅಮವಾಸ್ಯೆಯ ನಂತರ ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳು ಪ್ರಾರಂಭವಾಗುತ್ತವೆ. ಇಂದು ಆಟಿದ ನೆಂಪು ಕಾರ್ಯಕ್ರಮಗಳ ಮೂಲಕ ಎಲ್ಲೆಡೆ ವೈಧ್ಯಮಯ ಕಾರ್ಯಕ್ರಗಳು ನಡೆಯುತ್ತಿವೆ ಎಂದು ನಿವೃತ್ತ ಪ್ರಾಂಶುಪಾಲ ಆಲ್ಬನ್ ರೊಡ್ರಿಗಸ್ ಶಿರ್ವ ಹೇಳಿದ್ದಾರೆ.
ಶಿರ್ವ ರೋಟರಿ ವತಿಯಿಂದ ರವಿವಾರ ಬಂಟಕಲ್ಲು ಬಿ.ಸಿ.ರೋಡಿನ ಹಿರಿಯ ರೊಟೇರಿಯನ್ ಲೂಕಾಸ್ ಡಿಸೋಜ ಅವರ ನಿವಾಸ ಟ್ರೀನಿಟಿ ಯಲ್ಲಿ ಜರಗಿದ ಆಟಿದ ನೆಂಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ವರ್ಗಾವಣೆಗೊಂಡ ಶಿರ್ವದ ಪಶುವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ವಲಯ ಸಹಾಯಕ ಗವರ್ನರ್ ಶ್ರೀನಿವಾಸ ನಾಯಕ್ ಕಾರ್ಕಳ, ವಲಯ ಸೇನಾನಿ ವಿಷ್ಣುಮೂರ್ತಿ ಸರಳಾಯ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಶಿರ್ವ ರೋಟರಿ ಪ್ರಥಮ ಮಹಿಳಾ ಅಧ್ಯಕ್ಷೆ ಜೆಸಿಂತಾ ಡಿಸೋಜ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ರಘುಪತಿ ಐತಾಳ್ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಲಿಯಮ್ ಮಚಾದೊ ವಂದಿಸಿದರು. ಮಾಜಿ ಅಧ್ಯಕ್ಷ ಡಾ.ವಿಠಲ್ ನಾಯಕ್ ಸೌಹಾರ್ದ ಆಟಗಳನ್ನು ನಡೆಸಿಕೊಟ್ಟರು. ವೈಧ್ಯಮಯ ಆಟಿ ತಿಂಡಿ ತಿನಸುಗಳ ಭೋಜನ ಕೂಟ ವ್ಯವಸ್ಥೆ ಮಾಡಲಾಗಿತ್ತು.