ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ

Update: 2026-08-10 18:55 IST

ಕುಂದಾಪುರ, ಆ.10: ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಸದಸ್ಯರಿಗೆ ಶೇ.14.5 ಡಿವಿಡೆಂಡ್ ಘೋಷಿಸಿದರು.

ವರದಿ ವರ್ಷದಲ್ಲಿ ಸಂಘವು 70.50ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಇದು ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ಲಾಭವಾಗಿದೆ ಎಂದು ಅಧ್ಯಕ್ಷ ರಾಜೀವ ಪಡುಕೋಣೆ ತಿಳಿಸಿದರು.

ಬಳಿಕ ಸಂಘದ ವತಿಯಿಂದ ಪ್ರೋತ್ಸಾಹಧನ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಘದ ವ್ಯಾಪ್ತಿಯ ಹಿರಿಯ ರೈತ ಸದಸ್ಯರು, ಸಂಘದ ಸದಸ್ಯರಾಗಿರುವ ಕೃಷಿ ಕಾರ್ಮಿಕರು, ಹಿರಿಯ ಮೂರ್ತೆದಾರರು, ಮೇಸ್ತ್ರಿಗಳು ಹಾಗೂ ಹಿರಿಯ ವಾಹನ ಚಾಲಕರನ್ನು ಗೌರವಿಸಿ ಪ್ರೋತ್ಸಾಹಿಸಲಾಯಿತು.

ಸಂಘದ ಸದಸ್ಯರ ಕುಟುಂಬಗಳ ಪ್ರತಿಭೆ ಮತ್ತು ಸಾಧನೆಗಳಿಗೂ ಈ ಸಂದರ್ಭದಲ್ಲಿ ವಿಶೇಷ ಗೌರವ ನೀಡಲಾ ಯಿತು. ಹಿಂದುಸ್ತಾನಿ ಸಂಗೀತ, ಚೆಸ್ ಹಾಗೂ ಕುಸ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ಸಂಘದ ಸದಸ್ಯರ ಮಕ್ಕಳಿಗೂ ವಿಶೇಷ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಸಂಘದ ವಲಯ ಮೇಲ್ವಿಚಾರಕ ಶಿವರಾಮ, ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘದ ಮೇಲ್ವಿಚಾರಕರು, ಸಿಬ್ಬಂದಿ, ಸದಸ್ಯರು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಮ್ ಪೂಜಾರಿ ಸ್ವಾಗತಿಸಿ ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರ್ವಾಹಣಾಧಿಕಾರಿ ಭಾಸ್ಕರ್ ಮೊಗವೀರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News