ಉಡುಪಿ, ಸೆ.4: ಎಸ್‌ಡಿಪಿಐ ಪಕ್ಷದ ಮಹಿಳಾ ವಿಭಾಗವಾದ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿಯ 2026-29ರ ಅವಧಿಗೆ ನೂತನ ಜಿಲ್ಲಾಧ್ಯಕ್ಷೆಯಾಗಿ ನೌಶೀನ್ ಹಸ್ರತ್ ಆಯ್ಕೆಯಾಗಿದ್ದಾರೆ.

ಉಡುಪಿಯಲ್ಲಿ ನಡೆದ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಆಂತರಿಕ ಚುನಾವಣೆಯ ಮೂಲಕ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷತೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿಯ ಪ್ರಸ್ತುತ ಅಧ್ಯಕ್ಷೆ ನಾಝಿಯ ನಸ್ರುಲ್ಲ ವಹಿಸಿದ್ದರು.

ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ, ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ಹಾಗೂ ಜಿಲ್ಲಾ ಕಾರ್ಯದರ್ಶಿ ನಸೀಮ್ ಫಾತಿಮಾ ಅತಿಥಿಗಳಾಗಿದ್ದರು.

ನೂತನ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ರಹ್ಮತುನ್ನಿಸಾ, ಉಪಾಧ್ಯಕ್ಷೆಯಾಗಿ ಹಾಜಿರಾ, ಕಾರ್ಯದರ್ಶಿಯಾಗಿ ನಸೀರಾ ಹಾಗೂ ಕೋಶಾಧಿಕಾರಿಯಾಗಿ ಲುತ್ಫಿಯಾ, ಜಿಲ್ಲಾ ಸಮಿತಿ ಸದಸ್ಯರಾಗಿ ಅಲ್ಫಿಯಾ, ಆಸಿಯಾ ತರ್ಲ್ಝಾ, ಹಸೀನಾ, ಸನಾ ಸಿಕಂದರ್, ನಸೀಮ್ ಮುಬೀನ್, ಫರ್ಹಾ, ಫೌಸಿಯಾ ಹಾಗೂ ಶಂಶಾದ್ ಆಯ್ಕೆಯಾದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹ್ಮತುನ್ನಿಸಾ ಸ್ವಾಗತಿಸಿದರು. ಆಸಿಯಾ ತಲ್ಝಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor