ಸೆ.6: ಡುಂಡಿ -70 ಅಭಿನಂದನೆ, ಕುರಾಡಿ ಪ್ರಶಸ್ತಿ ಪ್ರದಾನ
ಉಡುಪಿ, ಸೆ.4: ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆಂಗಳೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ‘ಡುಂಡಿ 70’ ಅಭಿನಂದನಾ ಸಮಾರಂಭ, ಪುಸ್ತಕ ಲೋಕಾರ್ಪಣೆ ಹಾಗೂ ಕವಿ ಕುರಾಡಿ ಸೀತಾರಾಮ ಆಡಿಗ ಕಾವ್ಯ ಪ್ರಶಸ್ತಿ ಪ್ರದಾನ-2026 ಕಾರ್ಯಕ್ರಮವು ಸೆ.6ರಂದು ಸಂಜೆ 4 ಗಂಟೆಯಿಂದ ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆಯಲಿದೆ.
ಸಂಜೆ 4 ಗಂಟೆಗೆ: ಡಾ.ಮೀರಾ ಹೆಚ್.ಎನ್.ಅಭಿನಯದ ಪಂಚವರ್ಣೆ’ ಏಕವ್ಯಕ್ತಿ ರಂಗ ಪ್ರಯೋಗ ನಡೆಯಲಿದೆ. ಸಂಜೆ 5:15ಕ್ಕೆ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಡಾ. ಲಕ್ಷ್ಮಣ ವಿ.ಎ. ಅವರಿಗೆ ಸಾಹಿತಿ ಎಚ್.ಡುಂಡಿರಾಜ್ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಿರುವರು. ಸಂಜೆ 6 ಗಂಟೆಗೆ ಡುಂಡಿ 70’ ಅಭಿನಂದನಾ ಸಮಾರಂಭ ಹಾಗೂ ಎಚ್. ಡುಂಡಿರಾಜ್ ಅವರ ಡುಂಡಿ ಯಾತ್ರೆ’ ಮತ್ತು ಫೇಸ್‌ಬುಕ್ ಸಾಕ್ಷಾತ್ಕಾರ’ ಎಂಬ ಎರಡು ಪುಸ್ತಕಗಳ ಲೋಕಾರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.