ರಾಷ್ಟ್ರೀಯ ಮಟ್ಟದ ವಿಎಲ್‌ಎಸ್‌ಐ ಹ್ಯಾಕಥಾನ್: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿಗೆ ಪ್ರಥಮ ಸ್ಥಾನ
ನಿಟ್ಟೆ : ತಮಿಳುನಾಡಿನ ಕೊಯಮತ್ತೂರಿನ ಶ್ರೀ ಶಕ್ತಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನ ವಿಎಲ್‌ಎಸ್‌ಐ ಡಿಸೈನ್ ಮತ್ತು ಟೆಕ್ನಾಲಜಿ ವಿಭಾಗವು ಆಯೋಜಿಸಿದ್ದ 24 ಗಂಟೆಗಳ ರಾಷ್ಟ್ರೀಯ ಮಟ್ಟದ ವಿಎಲ್‌ಎಸ್‌ಐ ಹ್ಯಾಕಥಾನ್ ’ವೆಲ್ಟ್ರಾಕ್ಸ್ 26’ರಲ್ಲಿ ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ.
ಪ್ರಥಮ ಬಹುಮಾನ ಗೆದ್ದ ತಂಡದಲ್ಲಿ ಬಿಟೆಕ್ ವಿಎಲ್‌ಎಸ್‌ಐ ಡಿಸೈನ್ ಮತ್ತು ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿ ಗಳಾದ ಪ್ರಜ್ಞಾ ಮಹಾಬಲೇಶ್ವರ ಹೆಗ್ಡೆ, ಸೃಜನ್ ಶ್ರೀನಿವಾಸಮೂರ್ತಿ ಕುಲಕರ್ಣಿ ಮತ್ತು ಸುಪರ್ಣಾ ಯೋಗೇಶ್ ಇದ್ದರು.
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ‘ಚಿಪ್ ಟು ಸ್ಟಾರ್ಟ ಅಪ್-ಸಿ2ಎಸ್’ ಕಾರ್ಯಕ್ರಮದಡಿಯಲ್ಲಿ ಈ ಹ್ಯಾಕಥಾನ್‌ನ್ನು ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿ ಸಿದವರಿಗೆ ತಮ್ಮ ತಾಂತ್ರಿಕ ಪರಿಣತಿ, ನಾವೀನ್ಯತೆ ಮತ್ತು ಸಮಸ್ಯೆ ಗಳನ್ನು ಪರಿಹರಿಸುವ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸಿತ್ತು ಎಂದು ನಿಟ್ಟೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.