ಮಲ್ಪೆ, ಸೆ.10: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟಿನಿಂದ ಬಿದ್ದು ಮೀನು ಕಾರ್ಮಿಕರೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ಕೊಪ್ಪಳ ಜಿಲ್ಲೆಯ ಅಶೋಕ(42) ಎಂದು ಗುರುತಿಸಲಾಗಿದೆ. ಇವರು ಸಾಸ್ತಾನದ ಪ್ರಕಾಶ್ ಎಂಬವರ ಮಾಲಕತ್ವದ ಜಯಗಣೇಶ ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಬೋಟು ಸೆ.8ರಂದು ಸಂಜೆ ಮಲ್ಪೆಯಿಂದ ಕಾಪು ಕಡೆಗೆ ಹೊರಟಿದ್ದು, ರಾತ್ರಿ ವೇಳೆ ಅಶೋಕ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor