ಉಡುಪಿ, ಸೆ.28: ಉಡುಪಿ ಜಿಲ್ಲಾ ಬಿಜೆಪಿ ಮಾರ್ಗದರ್ಶನದಲ್ಲಿ ಜಿಲ್ಲಾ ಎಸ್‌ಟಿ ಮೋರ್ಚಾದ ಸಹಯೋಗದಲ್ಲಿ ಸೇವಾ ಸಂಕಲ್ಪ ಅಭಿಯಾನದಡಿ ಯಲ್ಲಿ ಸೇವಾ ಸೇತು ಅಭಿಯಾನ, ಸರಕಾರ ನಿಮ್ಮ ಬಾಗಿಲಿಗೆ ಶೀರ್ಷಿಕೆಯ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ, ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯ ಯೋಜನೆಗಳ 5 ಜನ ಫಲಾನುಭವಿಗಳಿಗೆ ಸನ್ಮಾನ ಹಾಗೂ ಪ್ರಧಾನ ಮಂತ್ರಿಗಳ ಮನ್ ಕೀ ಭಾತ್ ಕಾರ್ಯಕ್ರಮ ರವಿವಾರ ಕೆಳಪರ್ಕಳ ಕೂಡು ಕಟ್ಟಿನ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಉದ್ಘಾಟಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪ ಜಿ.ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್ ಅಲೆವೂರ್, ರೇಷ್ಮಾ ಉದಯ ಶೆಟ್ಟಿ, ಸೇವಾ ಸಂಕಲ್ಪ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಉಮೇಶ ಎ.ನಾಯ್ಕ್ ಚೇರ್ಕಾಡಿ, ಕಾರ್ಯಕ್ರಮದ ಉಸ್ತುವಾರಿ ರಾಘವೇಂದ್ರ ಕುಂದರ್, ಬಿಜೆಪಿ ನಗರ ಅಧ್ಯಕ್ಷ ದಿನೇಶ್ ಅಮೀನ್, ನಗರಸಭೆಯ ಮಾಜಿ ಅಧ್ಯಕ್ಷ ಸುಮಿತ್ರಾ ನಾಯಕ್, ಸರಳೇಬೆಟ್ಟು ವಾರ್ಡಿನ ಮಾಜಿ ನಗರಸಭೆಯ ಸದಸ್ಯ ವಿಜಯ ಲಕ್ಷ್ಮಿ, ಪರ್ಕಳ ವಾರ್ಡ್ ಅಧ್ಯಕ್ಷ ಹೇಮಂತ್ ಕುಮಾರ್, ತುಳಜಾ ಭವಾನಿ ದೇವಿಕಟ್ಟೆಯ ಗುರಿಕಾರರು ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.

ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಭುಜಂಗ ನಾಯ್ಕ್ ಮಣಿಪಾಲ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರಕಾರದ ಯೋಜನೆಯ ಫಲಾನುಭವಿ ಗಳಾದ ಸುಂದರಿ ಬಾಯಿ, ಭವ್ಯ ನಾಯ್ಕ್, ಅನಿತಾ ನಾಯ್ಕ್, ಸುನಂದ ನಾಯ್ಕ್, ಚಂದ್ರಶೇಖರ ನಾಯ್ಕ್ ಅವರನ್ನು ಸನ್ಮಾನಿಸಿದರು.

ಫಲಾನುಭಾವಿಗಳ ವಿವರವನ್ನು ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಭಾಷ್ ನಾಯ್ಕ್ ವಾಚಿಸಿದರು. ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ನಾಯ್ಕ್ ನೂಜಿನಬೈಲು ವಂದಿಸಿದರು. ಸೇವಾ ಸಂಕಲ್ಪದ ಜಿಲ್ಲಾ ಸಮಿತಿಯ ಸದಸ್ಯ ಕಮಲಾಕ್ಷ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor