ಉಡುಪಿ : ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ವಾರಾಂತ್ಯದಲ್ಲಿ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.

ರೈಲು ನಂ.06597/06598 ಬೆಂಗಳೂರು ಕಂಟೊನ್ಮೆಂಟ್- ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ರೈಲು ಅ.1 ಮತ್ತು ಅ.4ರಂದು ಈ ಮಾರ್ಗದಲ್ಲಿ ಸಂಚರಿಸಲಿದೆ.

ರೈಲು ನಂ.06597 ಬೆಂಗಳೂರು ಕಂಟೋನ್ಮೆಂಟ- ಮಡಗಾಂವ್ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.1ರ ಗುರುವಾರ ರಾತ್ರಿ 11:50ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಪ್ರಯಾಣ ಬೆಳೆಸಿ ಮರುದಿನ ಅ.2ರ ಸಂಜೆ 6:10ಕ್ಕೆ ಮಡಗಾಂವ್ ತಲುಪಲಿದೆ.

ಅದೇ ರೀತಿ ರೈಲು ನಂ.06598 ಮಡಗಾಂವ್ ಜಂಕ್ಷನ್- ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.4ರ ರವಿವಾರ ಬೆಳಿಗ್ಗೆ 8:40ಕ್ಕೆ ಮಡಗಾಂವ್‌ನಿಂದ ಹೊರಡಲಿದ್ದು, ಅದೇ ದಿನ ರಾತ್ರಿ 11:55ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.

ಈ ರೈಲಿಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಚಿಕ್ಕ ಬಾಣಾವರ, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ, ಕಾರವಾರ ಮತ್ತು ಕಾಣಕೋನ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ರೈಲು ಟೂಟಯರ್ ಎಸಿ ಒಂದು ಕೋಚ್, 3ಟಯರ್ ಎಸಿ ಮೂರು ಕೋಚ್, ಸ್ಲೀಪರ್ 10 ಕೋಚ್, ಜನರಲ್ 7 ಕೋಚ್, ಎಸ್‌ಎಲ್‌ಆರ್‌ಡಿ 2 ಕೋಚ್‌ಗಳು ಸೇರಿದಂತೆ ಒಟ್ಟು 23 ಕೋಚ್‌ಗಳನ್ನು ಹೊಂದಿರುತ್ತದೆ.

ಸೆ.30ರಿಂದ ಟಿಕೇಟ್ ಬುಕ್ಕಿಂಗ್: ವಾರಾಂತ್ಯದ ಈ ರೈಲಿಗೆ ಟಿಕೇಟ್ ಬುಕ್ಕಿಂಗ್ ಸೆ.30ರಂದು ಪ್ರಾರಂಭಗೊಳ್ಳಲಿದೆ. ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (ಪಿಆರ್‌ಎಸ್), ಇಂಟರ್‌ನೆಟ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೇಟ್‌ಗಳನ್ನು ಕಾದಿರಿಸಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor