ರಾಜ್ಯದಲ್ಲಿ ಕನಿಷ್ಠ ಕೂಲಿಗೆ ಒತ್ತಾಯಿಸಿ ಕುಂದಾಪುರ ಶಾಸಕರ ಕಚೇರಿ ಎದುರು ಸಿಐಟಿಯು ಪ್ರತಿಭಟನೆ
ಕುಂದಾಪುರ, ಸೆ.28: ರಾಜ್ಯ ಸರ್ಕಾರ ಮೇ 22ರಂದು ಪ್ರಕಟಿಸಿದ ಕನಿಷ್ಠ ಕೂಲಿಯನ್ನು ಯಥಾವತ್ತಾಗಿ ಜಾರಿಗೊ ಳಿಸದೆ ಕನಿಷ್ಠ ಕೂಲಿ ಪುನರ್ ಪರಿಶೀಲಿಸಲು ಉಪಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿರುವುದನ್ನು ಖಂಡಿಸಿ ತಕ್ಷಣವೇ ರಾಜ್ಯ ಸರ್ಕಾರ ಕನಿಷ್ಠ ಕೂಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕುಂದಾಪುರ ಸಿಐಟಿಯು ಸಂಚಾಲನ ಸಮಿತಿ ವತಿಯಿಂದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಅವರ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಿದರು.
ಮನವಿ ನೀಡುವುದಕ್ಕೂ ಮುನ್ನ ರಾಜ್ಯ ಸರಕಾರದ ಧೋರಣೆ ಖಂಡಿಸಿ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ನರಸಿಂಹ ಮಾತನಾಡಿ, ರಾಜ್ಯ ಸರಕಾರ 8 ವರ್ಷ ಗಳ ನಂತರ ಕನಿಷ್ಠ ಕೂಲಿ ಪ್ರಕಟಿಸಿದ್ದರು ಈಗಿನ ಮುಖ್ಯಮಂತ್ರಿಯವರು ಕೆಲವೇ ಮಾಲಕರ ಒತ್ತಡಕ್ಕೆ ಮಣಿದು ತಡೆ ಹಿಡಿದಿರುವುದು ಖಂಡನೀಯ ಎಂದರು. ಅದರೊಂದಿಗೆ ಕಾರ್ಮಿಕ ವರ್ಗದ ಇತರ ಬೇಡಿಕೆಗಳ ಬಗ್ಗೆ ಗಮನಸೆಳೆ ಯುತ್ತಾ 4 ಕಾರ್ಮಿಕ ಸಂಹಿತೆಗಳ ವಾಪಸತ್ತಿಗಾಗಿ ಇಎಸ್ಐ ಪಿಎಫ್ ಗ್ರಾಚುಟಿ ಬೋನಸ್ ಗೆ ಇರುವ ಆದಾಯ ಮಿತಿ ಹೆಚ್ಚಿಸಲು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಸ್ಕೀಮ್ ನೌಕರರನ್ನು ಕಾಯಂ ಮಾಡಲು ಕನಿಷ್ಠ ಕೂಲಿ ವ್ಯಾಪ್ತಿಯಿಂದ ಕೈ ಬಿಟ್ಟಿರುವ ಬೀಡಿ, ಗಾರ್ಮೆಂಟ್, ಗೇರುಬೀಜ ಕೈಗಾರಿಕೆ ಸೇರಿ ಇತರ ಕೈಗಾರಿಕೆ ಯನ್ನು ಸೇರ್ಪಡೆಗೊಳಿಸಲು ಒತ್ತಾಯಿಸಿದರು.
ಹಿರಿಯ ಮುಖಂಡರಾದ ವಿ. ನರಸಿಂಹ, ಕೆ. ಶಂಕರ್ ಜಿ.ಡಿ, ಪಂಜು ಪ್ರಕಾಶ್ ಕೋಣಿ, ಕಟ್ಟಡ ಸಂಘದ ಮುಖಂಡರಾದ ಸಂತೋಷ ಹೆಮ್ಮಾಡಿ ರಾಜು ಪಡುಕೋಣೆ, ಬೀಡಿ ಸಂಘದ ಮುಖಂಡರಾದ ಮಹಾಬಲ, ವಿ. ಬಲ್ಕಿಸ್ ಇದ್ದರು.
ತಾಲೂಕು ಸಂಚಾಲಕ ಚಂದ್ರಶೇಖರ ವಿ. ಸ್ವಾಗತಿಸಿ ಪ್ರಸ್ತಾವಿಸಿದರು. ಸಂತೋಷ ಹೆಮ್ಮಾಡಿ ವಂದಿಸಿದರು.