ಕೋಟ, ಸೆ.28: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಸಹಸವಾರೊಬ್ಬರು ಮೃತಪಟ್ಟ ಘಟನೆ ಹಾದರ್ಳ್ಳಿ ಮಂಡಳ್ಳಿ ಗ್ರಾಮದ ಜನ್ನಾಡಿ ಮೂರುಕೈ ಬಳಿ ಕೋಟೇಶ್ವರ ಹಾಲಾಡಿ ಮುಖ್ಯ ರಾಜ್ಯ ರಸ್ತೆಯಲ್ಲಿ ಸೆ.27ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಬೈಕ್ ಹಿಂಬದಿ ಸವಾರ ರಂಗ ಎಂದು ಗುರುತಿಸಲಾಗಿದೆ. ಸವಾರ ರಾಮ ಮಡಿವಾಳ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಅತೀವೇಗ ಹಾಗೂ ಅಜಾಗರೂಕೆತಯಿಂದ ಚಲಾಯಿಸಿ ಕೊಂಡು ಬಂದು ಹಾಲಾಡಿ ಕಡೆಯಿಂದ ಕೋಟೇಶ್ವರ ಕಡೆಗೆ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ಸವಾರ ರಾಮ ಮಡಿವಾಳ ಹಾಗೂ ಹಿಂಬದಿ ಸವಾರ ರಂಗ ಬೈಕ್ ಸಮೇತ ರಸ್ತೆಗೆ ಬಿದ್ದರು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ರಂಗ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor