ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು
ಕಾಪು, ಸೆ.29: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಇನ್ನಂಜೆ ಗ್ರಾಮದ ಸುಮಿತ್ರ ಪೂಜಾರಿ(69) ಎಂದು ಗುರುತಿಸಲಾಗಿದೆ. ಇವರು ಸೆ.18ರಂದು ಬೆಳಗ್ಗೆ ಅಡುಗೆ ಕೋಣೆಗೆ ಹೋಗಿ ಚಾ ಮಾಡುತ್ತಿದ್ದಾಗ ಅವರು ಧರಿಸಿದ್ದ ನೈಟಿಗೆ ಆಕಸ್ಮಿಕ ಬೆಂಕಿ ತಗುಲಿ ತ್ತೆನ್ನಲಾಗಿದೆ. ಇದರಿಂದ ಕುತ್ತಿಗೆ, ಕೆನ್ನೆಗೆ, ಎದೆಗೆ, ತೊಡೆಯ ಭಾಗಕ್ಕೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾ ಗದೆ ಸೆ.28ರಂದು ಮಧ್ಯಾಹ್ನ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.