ಉಡುಪಿ: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಬಸ್ ಕಳವು
ಸಾಂದರ್ಭಿಕ ಚಿತ್ರ
ಉಡುಪಿ, ಸೆ.29: ಪಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಸೆ.28ರಂದು ರಾತ್ರಿ ವೇಳೆ ಉಡುಪಿ ನಗರದ ಕಿನ್ನಿಮುಲ್ಕಿ ಎಂಬಲ್ಲಿ ನಡೆದಿದೆ.
ಬಸ್ ನಿರ್ವಾಹಕ ಕೃಷ್ಣ ಹಾಗೂ ಚಾಲಕ ರಾಯಿನ್ ಉಚ್ಚಿಲ ಶ್ರೀದುರ್ಗಾಂಬ ಬಸ್ಸನ್ನು ಸೆ.28ರಂದು ರಾತ್ರಿ ವೇಳೆ ಹನುಮಾನ್ ಪೆಟ್ರೋಲ್ ಬಂಕ್ ಹಿಂದುಗಡೆ ನಿಲ್ಲಿಸಿ ಹೋಗಿದ್ದರು. ಸೆ.29ರಂದು ಬೆಳಿಗ್ಗೆ ಬಂಕ್‌ಗೆ ಬಂದಾಗ ಬಸ್ ಕಳವಾಗಿರುವುದು ಕಂಡುಬಂದಿದೆ.
ಅಲ್ಲಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಅಪರಿಚಿತ ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಬಂಕ್ ಬಳಿ ನಿಲ್ಲಿಸಿದ್ದ ಬಸ್‌ನ್ನು ಕಳವು ಮಾಡಿ ಕೊಂಡು ಹೋಗಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ತನಿಖೆ ನಡೆಸಿದಾಗ ಕಳವಾದ ಬಸ್ ಕಾರ್ಕಳದಲ್ಲಿ ಪತ್ತೆ ಯಾಗಿದೆ. ಆದರೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.