ಉಡುಪಿ, ಅ.4: ಗಾಂಧಿ ಜಯಂತಿ ಪ್ರಯುಕ್ತ ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ಉಡುಪಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಉಪಯೋಗ ವಾಗುವ ಹಾಸಿಗೆ ಹೊದಿಕೆ, ಸ್ಥಾನದ ಟವೆಲ್ ಮತ್ತು ಬಿಸ್ಕೆಟ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ಸರ್ಜನ್ ಡಾ.ಅಶೋಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎರಡು ಸೇವಾ ಸಂಘ ಸಂಸ್ಥೆಗಳು ಜೊತೆ ಯಾಗಿ ಉಡುಪಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಯಲ್ಲಿರುವ 130 ರೋಗಿಗಳಿಗೆ ಉತ್ತಮ ಗುಣಮಟ್ಟದ ಹಾಸಿಗೆ ಹೊದಿಕೆ, ಸ್ನಾನದ ಟವೆಲ್ ಮತ್ತು ಬಿಸ್ಕೆಟ್ ಪೊಟ್ಟಣದ ಕಿಟ್ಟನ್ನು ವಿತರಿಸಿದವು.

ಈ ಸಂದರ್ಭದಲ್ಲಿ ಪ್ರಮುಖರಾದ ವಿಲ್ಫ್ರೆಡ್ ಡಿಸೋಜ, ಐರಿನ್ ಪಿರೇರಾ, ಜೋನ್ ಗೋಮ್ಸ್, ಉಷಾ ಲವೀನಾ, ಜೆರಾಲ್ಡ್ ಪಿರೇರಾ, ಸ್ಯಾಂಡ್ರಾ ಕ್ರಾಸ್ಟೊ ಮತ್ತಿತರರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್‌ಶೈನ್ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಸ್ಟೀವನ್ ಲೂವಿಸ್ ವಂದಿಸಿದರು. ಕೇಂದ್ರೀಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor