ಬ್ರಹ್ಮಾವರ, ಅ.4: ಹನೇಹಳ್ಳಿ ಗ್ರಾಮದ ಚಾಂಪಾಡಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಹನೇಹಳ್ಳಿ ಗ್ರಾಮದ ಚಾಂಪಾಡಿಯ ಅಣ್ಣಪ್ಪ ಪೂಜಾರಿ ಎಂಬವರ ಮೂಲ ಮನೆಗೆ ಆ.29ರಿಂದ ಸೆ.27ರ ಮಧ್ಯಾವಧಿ ಯಲ್ಲಿ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು, ಮನೆಯ ಬಚ್ಚಲು ಮನೆಯಲ್ಲಿದ್ದ ತಾಮ್ರದ ಹಂಡೆ, ತಾಮ್ರದ ಕೊಡಪಾನ, ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಲೈಟರ್, ಮನೆಯ ಕೋಣೆಯಲ್ಲಿದ್ದ ಹಿತ್ತಾಳೆಯ 4 ಕಾಲು ದೀಪ, ಹಿತ್ತಾಳೆಯ ಜಾಗಂಟೆ, ಹಿತ್ತಾಳೆಯ ಆರತಿ ತಟ್ಟೆ, ಹಿತ್ತಾಳೆಯ ಪೂಜಾ ಗಂಟೆ ಹಾಗೂ 3 ಕಾಣಿಕೆ ತುಂಬಿದ ಡಬ್ಬಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳವಾದ ಸೊತ್ತುಗಳ ಒಟ್ಟು ಮೌಲ್ಯ 30,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor