ಉಡುಪಿ, ಅ.5: ರೈಲ್ವೆ ಹಳಿಯ ತುರ್ತು ದುರಸ್ತಿ ಕಾರ್ಯ ನಡೆಯ ಲಿರುವ ಹಿನ್ನೆಲೆಯಲ್ಲಿ ಅ.7ರ ಬುಧವಾರ ಬೆಳಗ್ಗೆ 10:00ರಿಂದ ಸಂಜೆ 6:00 ಗಂಟೆಯವರೆಗೆ ಕುಂಜಾಲು ಮತ್ತು ಮಟಪಾಡಿಯನ್ನು ಸಂಪರ್ಕಿಸುವ ರಸ್ತೆಯ ಹಂದಾಡಿ ರೈಲ್ವೆ ಎಲ್.ಸಿ. ಗೇಟ್‌ನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಆದ್ದರಿಂದ ಈ ಸಮಯದಲ್ಲಿ ವಾಹನಗಳ ಸಂಚಾರ ವ್ಯತ್ಯಯಗೊಳ್ಳಲಿದ್ದು, ರಸ್ತೆಯ ಬಳಕೆದಾರರಿಗೆ ಈ ಬಗ್ಗೆ ಪೂರ್ವ ಮಾಹಿತಿ ನೀಡುವಂತೆ ಕೊಂಕಣ ರೈಲ್ವೆ ಗ್ರಾಮ ಪಂಚಾಯತ್‌ನ ಅಧಿಕಾರಿಗಳಿಗೆ ಪತ್ರ ಮುಖೇನ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor