ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
ಉಡುಪಿ, ಅ.12: ಸುಮಾರು 19 ವರ್ಷಗಳಿಂದ ಮಾನಸಿಕ ಕಾುಲೆಯಿಂದ ಬಳಲುತ್ತಿರುವ ನಗರದ ಅಲೆವೂರಿನ ನೆಹರು ನಗರದ ನಿವಾಸಿ ಕುಮಾರ ಕೃಷ್ಣ (47) ಎಂಬವರು ಸೆ.13ರಂದು ಬೆಳಗ್ಗೆ 10:30ರ ಸುಮಾರಿಗೆ ಅಲೆವೂರು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 10 ಇಂಚು ಎತ್ತರ, ಬಿಳಿ ಮಿಶ್ರಿತ ಗೋಧಿ ಬಣ್ಣ, ಕೋಲುಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕರು ಮೊ.ನಂ: 9480805448, ಪಿಎಸ್‌ಐ ಮೊ.ನಂ: 9480805475, 8277988945 ಹಾಗೂ ಮಣಿಪಾಲ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2526444ನ್ನು ಸಂಪರ್ಕಿಸಬಹುದುಎಂದು ಮಣಿಪಾಲ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.