ಕಾಪು, ಅ.12: ಕಾಪುವಿನ ಸರಸ್ವತಿ ಹೋಮ್‌ಸ್ಟೇಯ ಮಹಡಿಯಿಂದ ಬಿದ್ದು ಪ್ರವಾಸಿಗರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಬೆಂಗಳೂರು ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದ ಲೋಕೇಶ್ ಎಂಬವರ ಮಗ ಯೋಗೇಶ್ ಎಂದು ಗುರುತಿಸಲಾಗಿದೆ. ಕೊರಳೂರಿನ ಶ್ರೀನಿಧಿ ಇಂಜಿನಿಯರಿಂಗ್‌ನಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡಿ ಕೊಂಡಿದ್ದ ಯೋಗೇಶ್ ಅ.8ರಂದು ಸ್ನೇಹಿತರೊಂದಿಗೆ ಧರ್ಮಸ್ಥಳ, ಉಡುಪಿ, ಕಳಸ ಕಡೆಗೆ ಪ್ರವಾಸಕ್ಕೆ ಹೋಗಿ, ಕಾಪುವಿನ ಹೋಮ್ ಸ್ಟೇನಲ್ಲಿ ವಾಸವಾಗಿದ್ದರು.

ಅ.10ರಂದು ರಾತ್ರಿ ಇವರು ಮೊದಲ ಮಹಡಿಯ ಹೊರಂಡದಲ್ಲಿ ಮಲಗಿದ್ದು ಅ.11ರಂದು ಬೆಳಗಿನ ಜಾವ ಯೋಗೇಶ್ ಮೂತ್ರೆ ವಿಸರ್ಜನೆ ಹೋಗಲು ಕತ್ತಲಲ್ಲಿ ಹೋಗುತಿದ್ದಾಗ ಅಕಸ್ಮಿಕವಾಗಿ ಮಹಡಿಯಿಂದ ನೆಲೆಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor