ನಿಟ್ಟೆ, ಅ.14: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ (ಎನ್‌ಎಂಎಂಐಟಿ) ಗಣಿತ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಅನುಷಾ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಗೆ ಭಾಜನರಾಗಿದ್ದಾರೆ.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಕುಮುದಾಕ್ಷೀ ಅವರ ಮಾರ್ಗದರ್ಶ ನದಲ್ಲಿ ನಡೆಸಿದ ಸಂಶೋಧನೆ ಹಾಗೂ ಮಂಡಿಸಿದ ‘ಲೇಬ್ಲಿಂಗ್ಸ್ ಆಫ್ ಡೈರೆಕ್ಟೆಡ್ ಗ್ರಾಫ್ಸ್ ಅಂಡ್ ದೆಯರ್ ಅಪ್ಲಿಕೇಷನ್ಸ್’ ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ.

ಅನುಷಾ ಕುಂಟಲ್ಪಾಡಿಯ ಮಹಾಬಲ ಪೂಜಾರಿ ಹಾಗೂ ಸುಜಾತಾ ಪೂಜಾರಿ ದಂಪತಿಯ ಪುತ್ರಿ ಹಾಗೂ ನಿಟ್ಟೆಯ ಉದ್ಯಮಿ ಲತೇಶ್ ಅವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor