ಉಡುಪಿ: ರತ್ನಮಾಲಾರಿಗೆ ಡಾಕ್ಟರೇಟ್
ಉಡುಪಿ, ಅ.14: ರತ್ನಮಾಲಾ ಇವರು ‘ತುಳುನಾಡಿನ ಸ್ತ್ರೀದೈವಗಳ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನೆಗೆ ಮಣಿಪಾಲ ಮಾಹೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.
ರತ್ನಮಾಲಾ ಅವರು ಈ ಸಂಶೋಧನೆಯನ್ನು ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ (ಆರ್ಆರ್ಸಿ) ಮೂಲಕ, ಕಾರ್ಕಳದ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಇತಿಹಾಸ ಪ್ರಾಧ್ಯಾಪಕರೂ ಆಗಿರುವ ಪ್ರೊ.ಸುರೇಶ್ ರೈ ಕೆ. ಇವರ ಮಾರ್ಗದರ್ಶನದಲ್ಲಿ ಹಾಗೂ ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪುತ್ತಿ ವಸಂತಕುಮಾರ್ ಅವರ ಸಹ ಮಾರ್ಗದರ್ಶನ ದಲ್ಲಿ ನಡೆಸಿದ್ದರು.
ರತ್ನಮಾಲಾ ಪ್ರಸ್ತುತ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಿನ್ನಿಮೂಲ್ಕಿ ಬಲಾಯಿಪಾದೆಯ ಸುಧಾಕರ ಬಿ. ಸುವರ್ಣ ಇವರ ಪತ್ನಿ.