ವ್ಯಕ್ತಿ ಆತ್ಮಹತ್ಯೆ
ಬೈಂದೂರು, ಅ.14: ಮೋಟಾರು ಸೈಕಲ್ನಲ್ಲಿ ಐಸ್ಕ್ರೀಮ್ ಹಾಗೂ ಮೀನು ವ್ಯಾಪಾರ ಮಾಡಿಕೊಂಡಿದ್ದ ಬಿಜೂರು ಉಪ್ಪುಂದ ಮಾಧವ ದೇವಾಡಿಗ (52) ಅವರು ತನಗಿದ್ದ ಬೆನ್ನುನೋವು ಹಾಗೂ ಪತ್ನಿಯ ಕಾಯಿಲೆಯಿಂದ ಬೇಸತ್ತು ಇಂದು ಮುಂಜಾನೆ ಮನೆಯ ಸಮೀಪದ ಹಾಡಿಯಲ್ಲಿ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಮುಂಜಾನೆ 4ಗಂಟೆಗೆ ಮೀನು ವ್ಯಾಪಾರ ಮಾಡಲು ಭಟ್ಕಳಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಬೆಳಗ್ಗೆ 5:00ಗಂಟೆ ಸುಮಾರಿಗೆ ಅಳಿಯ ಚಂದ್ರರಿಗೆ ಕರೆ ಮಾಡಿ ತನಗೆ ಹಾಗೂ ಹೆಂಡತಿಗೆ ಹುಸಾರಿಲ್ಲ. ಎಲ್ಲರನ್ನೂ ಚೆನ್ನಾಗಿ ನೋಡಿಕೋ ಎಂದು ಹೇಳಿದ್ದರು. ಬಳಿಕ ಎಲ್ಲರೂ ಸೇರಿ ಹುಡುಕಿದಾಗ ಮನೆಯ ಬಳಿಯ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.