ಲಾರಿ ಢಿಕ್ಕಿ: ಸೈಕಲ್ ಸವಾರ ಮೃತ್ಯು
ಕೋಟ, ಅ.23: ಲಾರಿಯೊಂದು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಅ.22ರಂದು ಸಂಜೆ ವೇಳೆ ಐರೋಡಿ ಗ್ರಾಮದ ಮಾಬುಕಳ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಮಾಬುಕಳ ನಿವಾಸಿ ರೊನಾಲ್ಡ್ ಲೂವಿಸ್(62) ಎಂದು ಗುರುತಿಸಲಾಗಿದೆ. ಇವರು ಹಂಗಾರಕಟ್ಟೆಯಿಂದ ಮಾಬುಕಳ ಜಂಕ್ಷನ್‌ಗೆ ಸೈಕಲ್‌ನಲ್ಲಿ ಬಂದು, ರಸ್ತೆ ದಾಟಲು ನಿಂತಿದ್ದರು. ಆಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಲಾರಿ ಸೈಕಲ್‌ನಲ್ಲಿದ್ದ ರೊನಾಲ್ಡ್ ಲೂವಿಸ್ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರೊನಾಲ್ಡ್ ಲೂವಿಸ್, ಬ್ರಹ್ಮಾವರ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.