ಉಡುಪಿ, ಅ.23:ದೀಪಾವಳಿ ಹಬ್ಬದ ಪ್ರಯುಕ್ತ ಕೆನರಾ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿಂದ ಅ.24 ಮತ್ತು 25ರಂದು ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ‘ಕೆನರಾ ರಿಟೇಲ್ ಮೇಳ- 2026’ನ್ನು ಆಯೋಜಿಸಲಾಗಿದೆ ಎಂದು ಕೆರನಾ ಬ್ಯಾಂಕಿನ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಎಚ್.ಕೆ.ಗಂಗಾಧರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡೂ ದಿನಗಳಂದು ಬೆಳಗ್ಗೆ 10:00ರಿಂದ ರಾತ್ರಿ 8:00ಗಂಟೆಯವರೆಗೆ ಮೇಳ ನಡೆಯಲಿದ್ದು, ಇದನ್ನು ನಾಳೆ ಬೆಳಗ್ಗೆ 10ಗಂಟೆಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸುವರು. ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಮುಖ್ಯ ಅತಿಥಿಯಾಗಿರುವರು ಎಂದರು.

ಈ ಬಾರಿಯ ಮೇಳದಲ್ಲಿ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ವಾಹನ ಡೀಲರ್‌ಗಳು, ಸೋಲಾರ್ ಮಾರಾಟಗಾರರು ಭಾಗವಹಿಸಲಿದ್ದಾರೆ. ಮನೆ ನಿರ್ಮಾಣ, ನಿವೇಶನ ಖರೀದಿ, ವಾಹನ ಖರೀದಿಗೆ ಸಂಬಂಧಿಸಿ ದಂತೆ ಮಾಹಿತಿ ಹಾಗೂ ಸಾಲ ಸೌಲಭ್ಯಗಳನ್ನು ಗ್ರಾಹಕರು ಸ್ಥಳದಲ್ಲೇ ಪಡೆದುಕೊಳ್ಳ ಬಹುದು ಎಂದು ಗಂಗಾಧರ್ ತಿಳಿಸಿದರು.

ಗೃಹ ಸಾಲಕ್ಕೆ ಬಡ್ಡಿದರ ಶೇ.7.40ಯಿಂದ ಪ್ರಾರಂಭಗೊಂಡರೆ, ವಾಹನಗಳ ಸಾಲಕ್ಕೆ ಶೇ.7.70 ಬಡ್ಡಿದರ ವಿರುತ್ತದೆ. ದಾಖಲೆಗಳನ್ನು ಹೊಂದಿದ ಗ್ರಾಹಕರಿಗೆ ಸ್ಥಳದಲ್ಲೇ ಸಾಲ ಮಂಜೂರಾತಿ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಡಿಜಿಎಂ ಮಹಾಮಾಯ ಪ್ರಸಾದ್, ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಅರ್ಚನಾ, ಮೇಳದ ಸಂಚಾಲಕ ಕೌಶಿಕ್ ರೆಡ್ಡಿ ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor