ಉಡುಪಿ, ಅ.29: ಕಳೆದ ಸೆಪ್ಟೆಂಬರ್ 25ರಂದು ಕಟಪಾಡಿಯಲ್ಲಿ ಅಪಘಾತಕ್ಕೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಬಂಟಕಲ್ಲು ಪೊದಮಾಲೆ ಅನಂತ ಪದ್ಮನಾಭ ಭಟ್ (ಎ. ಪಿ ಭಟ್-62) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.

ಅವಿವಾಹಿತರಾಗಿದ್ದ ಎ.ಪಿ.ಭಟ್ ಸಹೋದರ, ಸಹೋದರಿಯರು ಹಾಗೂ ಅಪಾರ ಸ್ನೇಹಿತ ವರ್ಗವನ್ನು ಅಗಲಿದ್ದಾರೆ. ಪರೋಪಕಾರಿಯಾಗಿದ್ದ ಇವರು ಬೇರೆ ಜಿಲ್ಲೆಗಳ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವಲ್ಲಿ ವಿಶೇಷ ಕಾಳಜಿ ಹೊಂದಿದ್ದರು. ಬಿಜಾಪುರ ಮುಂತಾದ ಊರುಗಳಿಗೆ ಹೋಗಿ ಅಲ್ಲಿಯ ಶಿಕ್ಷಣ ವಂಚಿತ ವಿದ್ಯಾರ್ಥಿಗಳು, ಮತ್ತವರ ಮನೆಯವರ ಮನ ವೊಲಿಸಿ ವಿದ್ಯಾರ್ಥಿಗಳನ್ನು ಉಡುಪಿಗೆ ಕರೆತಂದು ಬೇರೆ ಬೇರೆ ಶಾಲೆಗಳಲ್ಲಿ, ಆಶ್ರಮ ಗಳಲ್ಲಿ, ವಸತಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡುತಿದ್ದರು.

ಬಸ್ ನಿರ್ವಾಹಕರಾಗಿಯೂ, ಕೃಷಿಕರಾಗಿಯೂ ಕೆಲಸ ಮಾಡಿದ್ದ ಎ.ಪಿ.ಭಟ್, ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor