ಬಸ್ ಚಾಲಕ, ನಿರ್ವಾಹಕರೊಂದಿಗೆ ದೀಪಾವಳಿ ಆಚರಣೆ
ಉಡುಪಿ, ನ.9: ಉಡುಪಿ ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವತಿಯಿಂದ ರಾತ್ರಿ ಪಾಳಿಯ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಜೊತೆ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲಾಯಿತು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಚಾಲಕರು-ನಿರ್ವಾಹಕರಿಗೆ ಆರತಿ ಬೆಳಗಿ, ಗಂಧವನ್ನಿಟ್ಟು ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಪ್ರತೀ ಬಸ್‌ನ ಒಳಗೆ ದೀಪದ ಪ್ರತೀಕವಾಗಿ ಲೈಟ್ ಇರಿಸಲಾಯಿತು. ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಅಧಿಕಾರಿಗಳಾದ ಸುಚಿತ್ ಕೋಟ್ಯಾನ್, ಡಾ.ರೇಖಾ ಎನ್.ಚಂದ್ರ, ಫ್ರಾಗ್ರೆನ್ಸ್ ಆಫ್ ಹ್ಯುಮಾನಿಟಿ ಪರವಾಗಿ ರಾಯನ್ ಮಥಾಯಸ್, ಸುಶ್ಮಿತಾ ಕುಮಾರಿ ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.