ಉಡುಪಿ, ನ.9: ಕರಾವಳಿ ಭಾಗದ ಯಕ್ಷಗಾನ ಕಲೆ ಹಾಗೂ ಕಲಾವಿದರ ಕ್ಷೇಮ ಚಿಂತನೆಯೊಂದಿಗೆ ಕಾರ್ಯ ಪ್ರವೃತ್ತವಾಗಿರುವ ಉಡುಪಿಯ ಯಕ್ಷಗಾನ ಕಲಾರಂಗ ಸಂಘಟನೆ ಪ್ರತಿವರ್ಷ ಯಕ್ಷಗಾನ ಕಲಾವಿದರಿಗೆ ನೀಡುವ ಪ್ರಶಸ್ತಿಗಳ ಸರಮಾಲೆ ಇನ್ನೆರಡು ಪ್ರಶಸ್ತಿಗಳು ಸೇರ್ಪಡೆಗೊಂಡಿವೆ. ಈ ಮೂಲಕ ಪ್ರತಿವರ್ಷ ಕಲಾರಂಗ ನೀಡುವ ಪ್ರಶಸ್ತಿಗಳ ಸಂಖ್ಯೆ 30ಕ್ಕೇರಿದೆ.

ಕರಾವಳಿಯ ಕಲಾ ಸಂಘಟನೆಯೊಂದಕ್ಕೆ ಒಂದು ಲಕ್ಷ ನಗದು ಪುರಸ್ಕಾರದ ವಿಶ್ವೇಶತೀರ್ಥ ಪ್ರಶಸ್ತಿ, ಯಕ್ಷಗಾನ ವಿದ್ವಾಂಸರಿಗೆ 60,000 ರೂ. ನಗದು ಪುರಸ್ಕಾರದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ‘ಯಕ್ಷಗಾನ ಕಲಾ ರಂಗ ಪ್ರಶಸ್ತಿ’ಯೊಂದಿಗೆ, ಕಲಾವಿದರ, ಗಣ್ಯರ ಸ್ಮರಣೆ ಹಾಗು ಗೌರವಾರ್ಥ ತಲಾ 20,000 ರೂ. ನಗದು ಪುರ ಸ್ಕಾರದ 26 ಯಕ್ಷಗಾನ ಕಲಾರಂಗ ಪ್ರಶಸ್ತಿಗಳನ್ನು ಈ ಸಂಘಟನೆ ಪ್ರತಿವರ್ಷ ನೀಡುತ್ತಾ ಬಂದಿದೆ.

ಇದೀಗ ಈ ವರ್ಷದಿಂದ ಪ್ರಶಸ್ತಿ ಗುಚ್ಛಕ್ಕೆ ಇನ್ನೆರಡು ಪ್ರಶಸ್ತಿಗಳು ಹೊಸದಾಗಿ ಸೇರ್ಪಡೆಗೊಳ್ಳಲಿವೆ. ಯಕ್ಷಗಾನ ಸಂಘಟಕ ಡಾ.ಟಿ.ಶ್ಯಾಮ್ ಭಟ್ಟರು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಮೂಲಕ ಇನ್ನೆರಡು ಪ್ರಶಸ್ತಿಗಳನ್ನು ಸ್ಥಾಪಿಸಲು ಸಂಕಲ್ಪಿಸಿದ್ದು, ಸಂಪಾಜೆಯಲ್ಲಿ ಶನಿವಾರ ಸಂಪನ್ನ ಗೊಂಡ ಯಕ್ಷೋತ್ಸವದಲ್ಲಿ ಪ್ರಶಸ್ತಿ ನಿಧಿ ಹಸ್ತಾಂತರಿಸಿದರು.

ಯಕ್ಷಗಾನದ ದಶಾವತಾರಿಯೆಂದೇ ಖ್ಯಾತರಾದ ಕೆ.ಗೋವಿಂದ ಭಟ್ಟರ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾ ರಂಗ ಪ್ರಶಸ್ತಿ’ 20,000ರೂ. ನಗದು ಪುರಸ್ಕಾರವನ್ನು ಒಳಗೊಂಡಿದ್ದರೆ, ಯಕ್ಷಗಾನದ ಸೀಮಾಪುರುಷ ಶೇಣಿ ಗೋಪಾಲಕೃಷ್ಣ ಭಟ್ ನೆನಪಿನ ‘ಶೇಣಿ ಪ್ರಶಸ್ತಿ’, ಸಂಸ್ಮರಣ ಕಾರ್ಯಕ್ರಮ ದೊಂದಿಗೆ 75,000 ರೂ.ನಗದು ಪುರಸ್ಕಾರ ಒಳಗೊಂಡಿರುತ್ತದೆ.

ಇದರಿಂದ ಯಕ್ಷಚೇತನ ಮತ್ತು ಸೇವಾ ಭೂಷಣ ಪ್ರಶಸ್ತಿಗಳು ಸೇರಿ ಕಲಾರಂಗ ಪ್ರತಿವರ್ಷ ನೀಡುವ ಒಟ್ಟೂ ಪ್ರಶಸ್ತಿ ಗಳ ಸಂಖ್ಯೆ ಮೂವತ್ತು ತಲುಪಿತು. ಡಾ.ಶ್ಯಾಮ್ ಭಟ್ಟ ತಮ್ಮ ನೆಚ್ಚಿನ ಮಹಾನ್ ಕಲಾವಿದರ ಹೆಸರಿನಲ್ಲಿ ಸ್ಥಾಪಿಸುವ ಪ್ರಶಸ್ತಿಗೆ ಹಾಗೂ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆರ್ಕಾ ಕೃತಜ್ಞತೆ ಸಲ್ಲಿಸಿದ್ದಾರೆ.

ಯಕ್ಷಗಾನ ಕಲಾರಂಗಕ್ಕೆ ಪ್ರಶಸ್ತಿ: ಸಂಪಾಜೆಯಲ್ಲಿ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಶನಿವಾರ ಆಯೋಜಿ ಸಿದ್ದ ಸಂಪಾಜೆ ಯಕ್ಷೋತ್ಸವದಲ್ಲಿ ಕಲೆ-ಕಲಾವಿದರು ಮತ್ತು ಸಾಮಾಜಿಕವಾಗಿ ಕೆಲಸ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಶ್ರೀಕೇಶವಾನಂದ ಭಾರತೀ ಮಹಾಸ್ವಾಮಿಗಳ ಪುಣ್ಯಸ್ಮೃತಿ ಯಲ್ಲಿ ಪ್ರದಾನ ಮಾಡಲಾದ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor