ಉಡುಪಿ, ನ.13: ಕಾವ್ಯಶಾಸ್ತ್ರ ವಿಚಾರ ಪರಿಷತ್ ವತಿಯಿಂದ ದಿವಂಗತ ಕುತ್ತೆತ್ತೂರು ಹಯಗ್ರೀವಾಚಾರ್ಯರ ಸಂಸ್ಮರಣಾರ್ಥ ಕುತ್ತೆತ್ತೂರು ಗೋವಿಂದ ದಾಸರ ದತ್ತಿನಿಧಿಯ ಪ್ರಾಯೋಜಕತ್ತ್ವದಲ್ಲಿ ಶಾಬ್ದಬೋಧ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಆಯೋಜಿಸಲಾಗಿತ್ತು.

ಉಪನ್ಯಾಸಕರಾಗಿ ಆಗಮಿಸಿದ ಪಲಿಮಾರು ಯೋಗದೀಪಿಕಾ ವಿದ್ಯಾಪೀಠದ ಉಪಪ್ರಾಂಶುಪಾಲ ಡಾ.ಸುದರ್ಶನ ಸಾಮಗ ಮಾತನಾಡಿ, ಶಬ್ದದಿಂದ ಉಂಟಾಗುವ ಜ್ಞಾನವೇ ಶಾಬ್ದಬೋಧ. ಶ್ರವಣದ ಬಳಿಕ ವೃತ್ತಿಜ್ಞಾನವು ಸರಿಯಾಗಿರದಿದ್ದಲ್ಲಿ ಅನರ್ಥವು ಉಂಟಾಗುವುದು. ಈ ಕಾಲದಲ್ಲಿ ಶಾಬ್ದಬೋಧದ ಜ್ಞಾನ ಎಲ್ಲರಿಗೂ ಅತ್ಯಂತ ಅವಶ್ಯವಾದು ದಾದಿದ್ದು, ಪ್ರತಿಪದಗಳ ಅರ್ಥಗಳ ಜೊತೆ ಅವುಗಳ ಪರಸ್ಪರ ಅನ್ವಯವು ಮನುಷ್ಯನ ಬುದ್ಧಿ ಸಾಮರ್ಥ್ಯವನ್ನು ಅವಲಂಬಿಸಿವೆ. ಹೀಗಾಗಿ ಪ್ರತಿಯೊಂದು ವಿಚಾರಗಳನ್ನು ಮೊದಲು ಸಂಪೂರ್ಣವಾಗಿ ಶ್ರವಣ ಮಾಡುವ ಅಭ್ಯಾಸ ಪ್ರತಿಯೊಬ್ಬ ವಿದ್ಯಾರ್ಥಿಯು ಮಾಡಬೇಕು ಎಂದರು

ಅಧ್ಯಕ್ಷತೆಯನ್ನು ವಹಿಸಿದ ಸಂಸ್ಕೃತ ಮಹಾಪಾಠಶಾಲೆಯ ಪ್ರಾಚಾರ್ಯ ಪ್ರೊ.ಅಮೃತೇಶಾಚಾರ್ಯ ಡಿ.ಎಸ್. ಮಾತನಾಡಿ, ವಸ್ತುತಃ ಶಾಬ್ದಬೋಧ ಎಲ್ಲರಲ್ಲೂ ಇದ್ದೇ ಇರುತ್ತದೆ. ಪ್ರತಿಯೊಂದು ಪದಗಳ ಅರ್ಥಜ್ಞಾನವಿದ್ದರೂ ಕಾಲವನ್ನು ಆಶ್ರಯಿಸಿ ಬಳಸುವ ಪ್ರಯೋಗಗಳನ್ನು ಅರ್ಥೈಸಿದರೆ ಅನರ್ಥಗಳು ಉಂಟಾಗಲಾರದು ಎಂದು ತಿಳಿಸಿದರು.

ಎಸ್‌ಎಂಎಸ್‌ಪಿ ಸಭೆಯ ಕಾರ್ಯದರ್ಶಿಗಳಾದ ವಿ.ಗೋಪಾಲಕೃಷ್ಣ ಜೋಯಿಸ ಉಪನ್ಯಾಸಕರನ್ನು ಗೌರವಿಸಿದರು. ಕಾವ್ಯಶಾಸ್ತ್ರ ವಿಚಾರ ಪರಿಷತ್‌ನ ಪ್ರಮುಖ ಡಾ.ಅಜಿತಕುಮಾರ ಪಿ. ಸ್ವಾಗತಿಸಿದರು. ವಿ. ಸತ್ಯಮೂರ್ತಿ ಅಡಿಗ ವಂದಿಸಿದರು. ಸುಮುಖ ಅಡಿಗ ಕಾರ್ಯಕ್ರಮ್ನ ನಿರ್ವಹಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor