×
Ad

ಮೇ 10 - 11ರಂದು ಮಲ್ಪೆ-ಕರಾವಳಿ ಜಂಕ್ಷನ್ ನಡುವೆ ಏಕಮುಖ ವಾಹನ ಸಂಚಾರ

Update: 2025-05-09 22:14 IST

ಉಡುಪಿ: ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆ ಅಗಲೀಕರಣ ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ರಸ್ತೆ ಬದಿ ತೆರವು ಕಾರ್ಯಾ ಚರಣೆ ನಡೆಯುವುದರಿಂದ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ಮೇ 10 ಮತ್ತು 11ರಂದು ಎರಡು ದಿನಗಳ ಕಾಲ ಬೆಳಗ್ಗೆ 8ರಿಂದ ಸಂಜೆ 8 ಗಂಟೆವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು (ವನ್‌ವೇ) ಮಾಡಲಾಗಿದೆ.

ಆದ್ದರಿಂದ ಮಲ್ಪೆ, ಮಲ್ಪೆ ಬಂದರು, ಮಲ್ಪೆ ಬೀಚ್‌ನಿಂದ ಉಡುಪಿ ಕಡೆಗೆ ಹೋಗುವ ಮೀನು ತುಂಬಿರುವ ವಾಹನ, ಭಾರಿ ಗಾತ್ರದ ಹಾಗೂ ಲಘು ವಾಹನ ಅಲ್ಲದೇ ಪ್ರವಾಸಿಗರು ಮಲ್ಪೆ ಜಂಕ್ಷನ್‌ನಿಂದ ಸಿಟಿಜನ್ ಸರ್ಕಲ್ ಮಾರ್ಗವಾಗಿ ಕೊಡವೂರು -ಲಕ್ಷ್ಮಿನಗರಕ್ರಾಸ್- ಲಕ್ಷ್ಮಿನಗರ ಜಂಕ್ಷನ್- ಆಶೀರ್ವಾದ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಸಂಚರಿಸಬೇಕು.

ದ್ವಿಚಕ್ರ ವಾಹನ ಮತ್ತು ಲಘು ವಾಹನಗಳು ಮಲ್ಪೆ ಜಂಕ್ಷನ್ ನಿಂದ ಕಲ್ಮಾಡಿ ಜಂಕ್ಷನ್, ಕಿದಿಯೂರು, ಕಡೆಕಾರ್‌ನಿಂದ ಕರ್ನ್ನಪಾಡಿ ದೇವಸ್ಥಾನ ಮಾರ್ಗ ವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಸಂಚರಿಸಬೇಕು.

ಮಾರ್ಗ 1 : ಮಲ್ಪೆ ಜಂಕ್ಷನ್ - ಸಿಟಿಜನ್ ಸರ್ಕಲ್ - ಕೊಡವೂರು - ಲಕ್ಷ್ಮಿನಗರ ಕ್ರಾಸ್ - ಲಕ್ಷ್ಮಿನಗರ ಜಂಕ್ಷನ್ - ಆಶೀರ್ವಾದ ನಗರ - ಉಡುಪಿ ರಾಷ್ಟ್ರೀಯ ಹೆದ್ದಾರಿ.

ಮಾರ್ಗ 2: ಮಲ್ಪೆ ಜಂಕ್ಷನ್ - ಕಲ್ಮಾಡಿ ಜಂಕ್ಷನ್ - ಕಿದಿಯೂರು- ಕಡೆಕಾರ್ - ಕನ್ನರ್ಪಾಡಿ ದೇವಸ್ಥಾನ - ರಾಷ್ಟ್ರೀಯ ಹೆದ್ದಾರಿ ತಲುಪಿ ಉಡುಪಿ ಕಡೆಗೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News