ಎಸೆಸೆಲ್ಸಿ ಪರೀಕ್ಷೆ: ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಉಡುಪಿ, ಮೇ 2: ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 2024-25ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳಲ್ಲಿ 74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟು 22 ವಿದ್ಯಾರ್ಥಿ ಗಳು ವಿಶಿಷ್ಟ ಶ್ರೇಣಿಯಲ್ಲಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ತೂಬಾ ಫಿರ್ದೋಸ್610(ಶೇ.97.60), ಶೈಮಾನಾಝ್ ಐ. 606(ಶೇ.96.96), ರಿದಾ 605(ಶೇ.96.80), ಅಮಿರತ್ ಅದ್ದುನ್ಯ 580(ಶೇ.92), ಅರ್ಸಿಯಾ ಅಂಜುಮ್ 568 (ಶೇ.90.88), ಐಶಾ ಮನಲ್ ಸಹೀರ್ ಅಹ್ಮದ್ 567(ಶೇ.90), ರಿಫಾತ್ ಝರಾ 594(ಶೇ.95.04), ಶೈಮಾ ನಾಝ್ 572(ಶೇ.91.52), ಸಫಿಯಾ ಸಗಿರುಲ್ಲಾ ಸೈಯ್ಯದ್ 588(ಶೇ.94.08), ಶಿಝಾ ನಸ್ರೀನ್ 586 (ಶೇ.93.76), ಸುನೈನಾ 598(95.68), ರೆಹರಿನ್ 574(91.84) ಅಂಕಗಳನ್ನು ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.