×
Ad

ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂಧೆ ವಿರುದ್ಧ ಕಾರ್ಯಾಚರಣೆ: 12 ಮಂದಿ ಆರೋಪಿಗಳ ಬಂಧನ

Update: 2025-06-02 19:59 IST

ಉಡುಪಿ, ಜೂ.2: ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಸೋಮವಾರ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 12 ಮಂದಿ ಆರೋಪಿ ಗಳನ್ನು ಬಂಧಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿನ ಮಟ್ಕಾ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರವಿವಾರ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಪ್ರಕರಣದಲ್ಲಿ ಬಂಧಿತನಾದ ಮಟ್ಕಾ ಬುಕ್ಕಿ ಲಿಯೋ ಕರ್ನೆಲಿಯೋ ನೀಡಿದ ಮಾಹಿತಿಯ ಆಧಾರದಲ್ಲಿ ಉಡುಪಿಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ.

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯಡ್ಕ ಪಂಚನಬೆಟ್ಟುವಿನ ಪ್ರಕಾಶ್ ಮೂಲ್ಯ(43) ಹಾಗೂ ಮಲ್ಪೆಯ ರತ್ನಾಕರ ಅಮೀನ್(48), ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಇಂದಿರಾನಗರದ ನಾಗೇಶ್(56), ಕೋಟ ಠಾಣಾ ವ್ಯಾಪ್ತಿಯಲ್ಲಿ ಕಾರ್ಕಡದ ವಿಜಯ ನಾಯರಿ(50), ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಪೇತ್ರಿಯ ದಿವಾಕರ ಪೂಜಾರಿ(42), ಶಿರಿಬೀಡು ಮಠದ ಬೆಟ್ಟುವಿನ ರಾಮ್‌ರಾಜ್(44), ಮೂಡಸಗ್ರಿಯ ಜಗದೀಶ್(39), ಕೊಪ್ಪಳ ಮೂಲದ ಅಂಬಾಗಿಲು ನಿವಾಸಿ ಚಿದಾನಂದ(35), ಮಲ್ಪೆ ಮಧ್ವನಗರದ ತಿಪ್ಪೆಸ್ವಾಮಿ(52), ಸಂತೆಕಟ್ಟೆ ಬಾಬು ನಾಯಕ್ ನಗರದ ರಾಘವೇಂದ್ರ(41), ಉಡುಪಿ ಪುತ್ತೂರಿನ ಉದಯ ಎಸ್.ಭಂಡಾರಿ(45), ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಉಚ್ಚಿಲದ ಮನೋಜ್ ಕುಮಾರ್(39) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News