×
Ad

ಹನೆಹಳ್ಳಿ ದಲಿತ ಯುವಕನ ಶೂಟ್‌ಔಟ್ ಪ್ರಕರಣ| ಆರೋಪಿಗಳ ಬಂಧನಕ್ಕೆ 15 ದಿನಗಳ ಗಡುವು: ಸುಂದರ್ ಮಾಸ್ಟರ್

Update: 2024-05-26 20:40 IST

ಉಡುಪಿ, ಮೇ 26: ಎರಡೂವರೆ ತಿಂಗಳ ಹಿಂದೆ ನಡೆದ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯ ದಲಿತ ಯುವಕ ಕೃಷ್ಣ ಶೂಟ್‌ಔಟ್ ಪ್ರಕರಣದ ಆರೋಪಿಗಳನ್ನು ಮುಂದಿನ 15 ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ವಿವಿಧ ಸಂಘಟನೆಗಳ ಸಹಯೋಗ ದೊಂದಿಗೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹತ್ಯೆ ನಡೆದು 2 ತಿಂಗಳು 21 ದಿನಗಳಾಗಿವೆ. ಆದರೆ ಹತ್ಯೆಯ ಆರೋಪಿ ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಂಪೂರ್ಣ ವಿಫಲ ಆಗಿದೆ. ಕೃಷ್ಣ ಯಾವುದೇ ಸಮಾಜ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದರಲ್ಲ. ಅವರ ವಿರುದ್ಧ ಯಾವುದೇ ಪ್ರಕರಣ ಕೂಡ ಇಲ್ಲ ಎಂದರು.

ದುಷ್ಕರ್ಮಿಗಳು ಕೊಲೆ ಮಾಡಿದ ಬಳಿಕ ಕೃಷ್ಣ ಅವರ ಮನೆಯಿಂದ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಪೊಲೀಸರು ಈ ಪ್ರಕರಣ ವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಆರೋಪಿಗಳನ್ನು ಈವರೆಗೆ ಬಂಧಿ ಸಿಲ್ಲ. ಈ ಕೃತ್ಯದಿಂದ ಜನ ಭಯಭೀತರಾಗಿದ್ದರೂ ಪೊಲೀಸ್ ಇಲಾಖೆ ಗಾಢ ಮೌನ ವಹಿಸಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಉಚ್ಚಿಲ ಬಡಾ ಗ್ರಾಮದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ದಲಿತರ ಮೃತದೇಹ ಸುಡಲು ಅಡ್ಡಿಪಡಿಸುತ್ತಿರುವ ಜಿಲ್ಲಾಡಳಿತವು ಕಳೆದ ಹಲವು ವರ್ಷ ಗಳಿಂದ ರುದ್ರಭೂಮಿಯ ಕಾಮಗಾರಿಯನ್ನು ಪೂರ್ತಿಗೊಳಿಸದೆ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಕಾಮಗಾರಿಯ ಬಗ್ಗೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ದಲಿತರ ಮೀಸಲು ಭೂಮಿ ಯನ್ನು ಇತರ ವರ್ಗದವರು ಆಕ್ರಮಿಸಿಕೊಂಡರೂ ಕೂಡ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದರು.

‘ಹನೆಹಳ್ಳಿ ದಲಿತ ಯುವಕನ ಶೂಟ್‌ಔಟ್ ಪ್ರಕರಣವನ್ನು ನಮ್ಮ ಸಂಘಟನೆ ಗಂಭೀರವಾಗಿ ಪರಿಗಣಿಸಿದೆ. ನಾಳೆಯೇ ಪೊಲೀಸ್ ಮಹಾನಿರ್ದೇಶಕರು, ಗೃಹಸಚಿವರು, ಸಾಧ್ಯವಾದರೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು. ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಾಗಲಿ. ಆ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು’

-ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕರು, ದಸಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News