ಕೈಕೊಟ್ಟ ಮತಯಂತ್ರ, ಅದಮಾರು ಶ್ರೀಯಿಂದ 2 ಬಾರಿ ಮತದಾನ!

Update: 2024-04-26 14:52 GMT

ಉಡುಪಿ, ಎ.26: ಉಡುಪಿ ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಮತ ಯಂತ್ರಗಳು ಕೈಕೊಟ್ಟ ಪರಿಣಾಮ ಕೆಲವು ಕಡೆ ಮತದಾನ ವಿಳಂಬವಾಗಿ ನಡೆದಿರುವ ಬಗ್ಗೆ ವರದಿಯಾಗಿದೆ.

ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಯಲ್ಲಿ ಮತಯಂತ್ರದಲ್ಲಿನ ತಾಂತ್ರಿಕ ಸಮಸ್ಯೆ ಯಿಂದ ಮತದಾನ ಅರ್ಧ ಗಂಟೆ ವಿಳಂಬವಾಗಿ ಪ್ರಾರಂಭವಾಯಿತು. ಇದರಿಂದ ಆರಂಭದಲ್ಲಿ ಮತದಾನಕ್ಕೆ ದೊಡ್ಡ ಸರತಿ ಸಾಲೇ ನಿಂತಿರುವುದು ಕಂಡುಬಂತು.

ಅದೇ ರೀತಿ ಆದಿಉಡುಪಿ, ಕಾಪು, ಬ್ರಹ್ಮಾವರ, ಮಣೂರುಗಳಲ್ಲಿನ ಮತಗಟ್ಟೆಗಳಲ್ಲೂ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದವು. ಬಳಿಕ ದೋಷವನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ.

ಎರಡು ಬಾರಿ ಮತದಾನ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಎರಡು ಬಾರಿ ಮತದಾನ ಮಾಡಿದ ಘಟನೆ ಉಡುಪಿ ನಗರದ ನಾರ್ತ್ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.

ಅದಮಾರು ಸ್ವಾಮೀಜಿ ಮತಗಟ್ಟೆಯಲ್ಲಿ ನೋಂದಣಿ ಮಾಡಿ, ಕೈಗೆ ಇಂಕ್ ಹಾಕಿಸಿಕೊಂಡು ಮೊದಲಿಗರಾಗಿ ಮತದಾನ ಮಾಡಿ ದರು. ಆದರೆ ಯಂತ್ರ ದಲ್ಲಿ ಬಟನ್ ಒತ್ತಿದರು. ಆದರೆ ಯಂತ್ರದಲ್ಲಿ ಮತದಾನ ಆದ ಬಗ್ಗೆ ಬೀಪ್ ಶಬ್ದ ಬರಲಿಲ್ಲ. ಆದರೂ ಅಧಿಕಾರಿಗಳು ಮತದಾನವಾಗಿದೆ ಎಂದು ಹೇಳಿ ಸ್ವಾಮೀಜಿಯನ್ನು ಕಳುಹಿಸಿಕೊಟ್ಟರು.

ಹಾಗೆ ಸ್ವಾಮೀಜಿ ಮತಗಟ್ಟೆಯಿಂದ ವಾಪಾಸ್ ಆಗಿದ್ದರು. ಬಳಿಕ ನಾಲ್ಕೈದು ನಿಮಿಷದ ಬಳಿಕ ಸ್ವಾಮೀಜಿಯನ್ನು ಕರೆಸಿದ ಅಧಿಕಾರಿಗಳು, ಮತದಾನ ಆಗದ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಸ್ವಾಮೀಜಿ ಎರಡನೇ ಬಾರಿ ಬಂದು ಮತ್ತೆ ಮತದಾನ ಮಾಡಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News