ಜಿಲ್ಲೆಯ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಮಿಂಚಲಿ: ಯಶ್ಪಾಲ್ ಸುವರ್ಣ
ಉಡುಪಿ: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
ಉಡುಪಿ, ಸೆ.13: ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದು, ರಾಜ್ಯಮಟ್ಟದಲ್ಲೂ ಅವರು ಮಿಂಚಿ ತವರು ಜಿಲ್ಲೆಗಳ ಗೌರವ ಹೆಚ್ಚಿಸುವ ಕಾರ್ಯ ಮಾಡಲಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಶನಿವಾರ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ವಿವಿಧ ಜಿಲ್ಲೆಗಳಿಂದ ಉಡುಪಿಗೆ ಆಗಮಿಸುವ ಕ್ರೀಡಾಪಟುಗಳಿಗೆ ಜಿಲ್ಲೆ ಯಲ್ಲಿ ಉತ್ತಮ ಪ್ರೋತ್ಸಾಹ ದೊರಕುತ್ತಿದೆ. ಕ್ರೀಡಾಂಗಣದ ಸೌಲಭ್ಯಗಳನ್ನು ಬಳಸಿಕೊಂಡು ಅವರು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿ ಎಂದು ಅವರು ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ ರೋಶನ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲೆಗಳ ಕ್ರೀಡಾ ಸಂಚಾಲಕರು ಉಪಸ್ಥಿತರಿದ್ದರು.
ದಸರಾ ಕ್ರೀಡಾಕೂಟದ ಮೈಸೂರು ವಿಭಾಗ ಮಟ್ಟದ ವಿವಿಧ ಸ್ಪರ್ಧೆಗಳು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದು, ಇಲ್ಲಿ ತ್ರೋಬಾಲ್, ಟೇಬಲ್ ಟೆನಿಸ್, ಲಾನ್ ಟೆನಿಸ್, ವುಶು ಹಾಗೂ ಅಥ್ಲೆಟಿಕ್ಸ್‌ನ ಕೆಲವು ಸ್ಪರ್ಧೆಗಳು ನಡೆದವು.
ದಸರಾ ಕ್ರೀಡಾಕೂಟದಲ್ಲಿ ಮೊದಲ ದಿನದ ಫಲಿತಾಂಶ:
ತ್ರೋಬಾಲ್: ಪುರುಷರ ವಿಭಾಗ:1.ಮೈಸೂರು ಜಿಲ್ಲೆ, 2.ಚಾಮರಾಜನಗರ ಜಿಲ್ಲೆ. ಮಹಿಳೆಯರ ವಿಭಾಗ: 1.ಉಡುಪಿ ಜಿಲ್ಲೆ, 2. ದಕ್ಷಿಣ ಕನ್ನಡ ಜಿಲ್ಲೆ.
ಅಥ್ಲೆಟಿಕ್ಸ್: ಪುರುಷರ ವಿಭಾಗ:
100ಮೀ.: 1.ಧನುಷ್ ಉಡುಪಿ, 2.ಮಂಜು ಎಂ. ದ.ಕ., 3.ಯಶಸ್ ದ.ಕ.. 800ಮೀ:1.ಯಶ್ವಂತ್ ಕೆ. ದ.ಕ., 2.ರಾಮು ದ.ಕ., 3.ಶಸಾಂಕ್ ಗೌಡ ಎಸ್. ಮೈಸೂರು. 5000ಮೀ.: 1.ಚೆನ್ನಕೇಶವ ಜಿ.ಎಲ್. ದ.ಕ., 2.ನಿತಿನ್ ಯು.ಎಲ್ ದ.ಕ, 3.ಶಾಸ್ವತ್ ಪೂಜಾರಿ ಉಡುಪಿ.
ಲಾಂಗ್‌ಜಂಪ್: 1.ಅನುಷ್ ಟಿ.ಆರ್. ಉಡುಪಿ, 2.ಗುರು ಎಂ.ಎಸ್. ದ.ಕ., 3.ನೋಯೆಲ್ ಆರ್.ಪಿ. ದ.ಕ. ಜಾವೆಲಿನ್ ಥ್ರೋ: 1.ಸಿದ್ದಪ್ಪ ದಂಡಿನ ಉಡುಪಿ, 2.ರಾಘವೇಂದ್ರ ನಾಯಕ್ ಉಡುಪಿ, 3.ಗೌತಮ್ ಮೊಗವೀರ್ ದ.ಕ., 400ಮೀ. ರಿಲೇ:1.ದ.ಕ.ತಂಡ, 2.ಉಡುಪಿ ತಂಡ.
ಮಹಿಳೆಯರ ವಿಭಾಗ:
100ಮೀ.: 1.ಮಮತಾ ಎಂ. ಮೈಸೂರು, 2.ಪ್ರಗತಿ ಬಿ.ಎಸ್. ಉಡುಪಿ, 3.ರಿದಿ ಚೌಟ ದ.ಕ., 800ಮೀ.: 1.ರೇಖಾ ಬಿ. ದ.ಕ., 2.ಪ್ರಿಯಾಂಕ ಎಂ. ದ.ಕ., 3.ಲಕ್ಷ್ಮೀ ಮೈಸೂರು. 3000ಮೀ.:1. ಪ್ರಣಮ್ಯ ದ.ಕ., 2.ನಂದಿನಿ ಉಡುಪಿ, 3.ಭವಿಷ್ಯ ಡಿ.ಕೆ. ಕೊಡಗು.
ಲಾಂಗ್‌ಜಂಪ್: 1.ಶ್ರೀದೇವಿಕಾ ಶೆಟ್ಟಿ ಉಡುಪಿ, 2.ಐಶ್ವರ್ಯ ಉಡುಪಿ, 3.ಲಿನ್ಯಾ ಮೇರಿ ಮೈಸೂರು. ಜಾವೆಲಿನ್ ಥ್ರೋ: 1.ಶ್ರಾವ್ಯ ಉಡುಪಿ, 2. ಶಹಜಾಹಾನಿ ಮೈಸೂರು, 3. ನಂದ ದ.ಕ., 400ಮೀ. ರಿಲೇ: 1.ದ.ಕ. ಜಿಲ್ಲಾ ತಂಡ, 2.ಉಡುಪಿ ಜಿಲ್ಲಾ ತಂಡ, 3.ಕೊಡಗು ಜಿಲ್ಲಾ ತಂಡ.