×
Ad

ಉಡುಪಿ: ಅ.23ರಂದು ವಕ್ಫ್ ಆಸ್ತಿ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ಕಾರ್ಯಾಗಾರ

Update: 2025-10-21 13:35 IST

ಸಾಂದರ್ಭಿಕ ಚಿತ್ರ (credit: economictimes)

ಉಡುಪಿ, ಅ.21: ಉಡುಪಿ ಜಿಲ್ಲೆಯ ಎಲ್ಲಾ ವಕ್ಫ್ ಆಸ್ತಿಗಳನ್ನು ಯುಡಬ್ಲ್ಯುಎಂಇಇಡಿ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಅ.23ರಂದು ಪೂರ್ವಾಹ್ನ 11 ಗಂಟೆಗೆ ಉಡುಪಿ ಜಾಮಿಯಾ ಮಸೀದಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಉಡುಪಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು, ಮುತವಲ್ಲಿಗಳು, ಆಡಳಿತಾಧಿಕಾರಿಗಳು ಹಾಗೂ ಕೇರ್ ಟೇಕರ್ ಗಳಿಗೆ ವಕ್ಫ್ ಕಾಯ್ದೆ ಕಲಂ 32(2)(ಡಿ) ಅಡಿಯಲ್ಲಿ ಪೋರ್ಟಲ್ ನಲ್ಲಿ ಮೇಕರ್ ಆಗಿ ನೋಂದಣಿ ಮಾಡಿಕೊಳ್ಳುವುದು ಹಾಗೂ ತಮ್ಮ ಸಂಸ್ಥೆಗಳ ವಕ್ಫ್ ಆಸ್ತಿಗಳ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೂಚಿಸಿದೆ. ನೋಂದಣಿ ಮತ್ತು ದಾಖಲೆ ಅಪ್ಲೋಡ್ ಕಾರ್ಯವನ್ನು 30 ದಿನಗಳ ಒಳಗೆ ಪೂರ್ಣಗೊಳಿಸಬೇಕಾಗಿದೆ. ಆದ್ದರಿಂದ ಈ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು, ಮುತವಲ್ಲಿಗಳು, ಅಡಳಿತಾಧಿಕಾರಿಗಳು ಹಾಗೂ ಕೇರ್ಟೇಕರ್ ಗಳು ಹಾಜರಿರಬೇಕೆಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News