×
Ad

ಉಡುಪಿ: ಅ.25ರಂದು ಕೆನರಾ ರಿಟೈಲ್ ಮೇಳ

Update: 2024-10-23 21:40 IST

ಉಡುಪಿ, ಅ.23: ದೀಪಾವಳಿ ಹಬ್ಬದ ಪ್ರಯುಕ್ತ ಕೆನರಾ ಬ್ಯಾಂಕ್ ಇದೇ ಅ.25ರಂದು ಬೆಳಗ್ಗೆ 10ರಿಂದ ಅಪರಾಹ್ನ 2ಗಂಟೆ ಯವರೆಗೆ ಕೆನರಾ ರಿಟೈಲ್ ಮೇಳ-2024ನ್ನು ಉಡುಪಿ ಕೋರ್ಟ್ ರಸ್ತೆಯ ರಿಟೇಲ್ ಅಸೆಟ್ ಹಬ್‌ನಲ್ಲಿ ಆಯೋಜಿಸಿದೆ ಎಂದು ಹಬ್‌ನ ಪ್ರಾದೇಶಿಕ ಮ್ಯಾನೇಜರ್ ಕೌಶಿಕ್ ರೆಡ್ಡಿ ತಿಳಿಸಿದ್ದಾರೆ.

ಗ್ರಾಹಕರು ಇದರಲ್ಲಿ ಯಾವುದೇ ಸಂಸ್ಕರಣ ಶುಲ್ಕವಿಲ್ಲದೆ ವಾಹನ ಸಾಲ ಹಾಗೂ ಮನೆ ಸಾಲವನ್ನು ಪಡೆಯಲು ಸಾಧ್ಯವಿದೆ. ಮನೆ ಸಾಲಕ್ಕೆ ಶೇ.8.4 ಹಾಗೂ ವಾಹನ ಸಾಲಕ್ಕೆ ಶೇ.8.7 ಬಡ್ಡಿ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಪ್ರಮುಖ ಬಿಲ್ಡರ್‌ಗಳು ಹಾಗೂ ವಾಹನ ಡೀಲರ್‌ಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಸಾಲಕ್ಕೆ ಯಾವುದೇ ಜಾಮೀನಿನ ಅಗತ್ಯವಿಲ್ಲ. ಆದಾಯ ತೆರಿಗೆಯಿಂದಲೂ ವಿನಾಯಿತಿ ಇದೆ. ಆಕರ್ಷಕ ದರದಲ್ಲಿ ಸುಲಭ ಸಾಲ ಲಭ್ಯವಿದೆ ಎಂದರು. ಪ್ರಧಾನ ವ್ಯವಸ್ಥಾಪಕ ಸೂರಜ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಅಂಕುಶ್ ಸಾಲ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News