ಮೇ 3ಕ್ಕೆ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಟೆಂಡರ್‌ಗಳ ಪ್ರೀ-ಬಿಡ್ ಸಭೆ
ಉಡುಪಿ, ಎ.30: ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಉಡುಪಿ ತಾಲೂಕು ಆಸರೆ ಬೀಚಿನಲ್ಲಿ ಜಲಸಾಹಸ ಕ್ರೀಡೆ, ಸೈಂಟ್ ಮೇರೀಸ್ ಐಲ್ಯಾಂಡ್‌ಗೆ ಬೋಟಿಂಗ್ ಚಟುವಟಿಕೆ, ಕುಂದಾಪುರ ತಾಲೂಕು ಕೋಡಿ ಬೀಚ್ ನಿರ್ವಹಣೆ ಹಾಗೂ ಜಲಸಾಹಸ ಕ್ರೀಡಾ ಚಟುವಟಿಕೆ ಮತ್ತು ಉಡುಪಿ ತಾಲೂಕು ಮಲ್ಪೆ ಸೀವಾಕ್ ವೇ ಪ್ರದೇಶದಿಂದ ಪಕ್ಕದ ದರಿಯಾ ಬಹದ್ದೂರ್‌ಘಡ ಹಾಗೂ ಮಾಲ್ತಿ ದ್ವೀಪಗಳಿಗೆ ಬೋಟ್ ಮೂಲಕ ರೌಂಡಿಂಗ್ ಹಾಗೂ ದ್ವೀಪದಲ್ಲಿ ನೇಚರ್ ವಾಕ್ ಚಟುವಟಿಕೆ ಮತ್ತು ದ್ವೀಪಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಇಚ್ಛಿಸಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಈ ಬಗ್ಗೆ ಖಾಸಗಿಯವರೊಂದಿಗೆ ಮೇ 3ರಂದು ಬೆಳಗ್ಗೆ 11:30ಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರೀ-ಬಿಡ್ ಸಭೆ ನಡೆಯಲಿದ್ದು, ಆಸಕ್ತ ಬಿಡ್ಡುದಾರರು ಈ ಸಭೆಯಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಎ ಬ್ಲಾಕ್, ಎರಡನೇ ಮಹಡಿ, ರೂಮ್ ನಂ 303, ರಜತಾದ್ರಿ, ಮಣಿಪಾಲ ದೂರವಾಣಿ: 0820-2574868ನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.