ಗಾಳಿಮಳೆ: ಎಂಟು ಮನೆಗಳು, 5 ಕೊಟ್ಟಿಗೆಗಳಿಗೆ ಹಾನಿ
ಉಡುಪಿ, ಮೇ 26: ಜಿಲ್ಲೆಯಾದ್ಯಂತ ಹಲವು ಕಡೆ ಸುರಿದ ಗಾಳಿ ಮಳೆಯಿಂದಾಗಿ ಒಟ್ಟು 8 ಮನೆಗಳು ಹಾಗೂ 5 ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು 6ಲಕ್ಷ ರೂ. ನಷ್ಟ ಉಂಟಾಗಿ ರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಕಾರ್ಕಳ- 5.5ಮಿ.ಮೀ., ಕುಂದಾಪುರ -0.9ಮಿ.ಮೀ., ಉಡುಪಿ- 0.3ಮಿ.ಮೀ., ಬ್ರಹ್ಮಾವರ- 2.8ಮಿ.ಮೀ., ಕಾಪು- 2.5ಮಿ.ಮೀ., ಹೆಬ್ರಿ- 0.2ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 1.8 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.
ಕುಂದಾಪುರ ತಾಲೂಕಿನ ಅಂಪಾರು, ಮೊಳಹಳ್ಳಿ, ಶಂಕರನಾರಾಯಣ ಹಾಗೂ ಕಾವ್ರಾಡಿ ಗ್ರಾಮದ ಆರು ಮನೆಗಳಿಗೆ ಗಾಳಿಮಳೆಯಿಂದಾಗಿ ಭಾಗಶಃ ಹಾನಿಯಾಗಿದ್ದು, ಒಟ್ಟು 5 ಲಕ್ಷ ರೂ.ನಷ್ಟ ಉಂಟಾಗಿದೆ.
ಉಡುಪಿ ತಾಲೂಕಿನ ಕಿದಿಯೂರು ಗ್ರಾಮದ ರತ್ನ ಸುವರ್ಣ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 40,000ರೂ. ಮತ್ತು ಕಾರ್ಕಳ ತಾಲೂಕಿನ ಸೂಡ ಗ್ರಾಮದ ಬೇಬಿ ಎಂಬವರ ಮನೆ ಗಾಳಿ ಮಳೆಯಿಂದ ಭಾಗಶ: ಹಾನಿ ಯಾಗಿ 30,000ರೂ. ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ, ರಟ್ಟಾಡಿ, ಅಂಪಾರು ಗ್ರಾಮಗಳ ಐದು ಮನೆಗಳ ಜಾನುವಾರು ಕೊಟ್ಟಿಗೆ ಮಳೆ ಯಿಂದಾಗಿ ಭಾಗಃಶ ಹಾನಿಯಾಗಿ ಒಟ್ಟು 38ಸಾವಿರ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತ ಕಚೇರಿ ಮೂಲಗಳು ತಿಳಿಸಿವೆ.