×
Ad

ಉಡುಪಿ ಜಿಲ್ಲೆಯಲ್ಲಿ ಶೇ.63ರಷ್ಟು ಮನೆಗಳ ಸಮೀಕ್ಷೆ ಪೂರ್ಣ: ಬೈಂದೂರಿನಲ್ಲಿ ಅತ್ಯಧಿಕ, ಉಡುಪಿಯಲ್ಲಿ ಕನಿಷ್ಠ ಗಣತಿ

Update: 2025-10-07 21:21 IST

ಉಡುಪಿ, ಅ.7: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯು ತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಪೂರ್ವ ನಿಗದಿತ ದಿನ ಇಂದಿಗೆ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಕೇವಲ ಶೇ.63 ಮನೆಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ರಾಜ್ಯದಲ್ಲಿ ಶೇ.80.82ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 3,62,093 ಮನೆಗಳ ಗಣತಿ ನಡೆಯ ಬೇಕಾಗಿದ್ದು, ಇಂದು ಸಂಜೆಯವರೆಗೆ ಒಟ್ಟು 2,28,157 ಮನೆಗಳ ಗಣತಿ ಮುಗಿಸಿ ಶೇ.63ರಷ್ಟು ಸಾಧನೆ ಮಾಡಲಾಗಿದೆ. 15ನೇ ದಿನವಾದ ಇಂದು ಒಟ್ಟು 10,351 ಮನೆಗಳ ಜನರ ಗಣತಿಯನ್ನು ಮಾತ್ರ ಸಮೀಕ್ಷೆಗಾರರು ಮಾಡಿ ಮುಗಿಸಿದ್ದಾರೆ.

ಸೆ.22ರಿಂದ ಅ.7ರವರೆಗೆ ನಡೆಯಲು ನಿಗದಿಯಾಗಿದ್ದ ಸಮೀಕ್ಷೆಯ ಅಂತಿಮ ದಿನಾಂಕವನ್ನು ಸರಕಾರ ಇದೀಗ ವಿಸ್ತರಿಸಿದೆ. ಆದರೆ ಉಡುಪಿ ಜಿಲ್ಲೆಯ ಇದುವರೆಗಿನ ಸಾಧನೆ ನಿರಾಶಾದಾಯಕವಾಗಿದ್ದು, ಪಕ್ಕದ ದಕ್ಷಿಣ ಕನ್ನಡಕ್ಕಿಂತಲೂ ಕೆಳಗಿನ ಸ್ಥಾನಕ್ಕಿಳಿದಿದೆ.

ಜಿಲ್ಲೆಯ ಸಾಧನೆಯನ್ನು ಗಮನಿಸಿ ಹೇಳುವುದಾದರೆ ಬೈಂದೂರು ತಾಲೂಕಿ ನಲ್ಲಿ ಅತ್ಯಧಿಕ ಅಂದರೆ 85.6ರಷ್ಟು ಮನೆಗಳ ಗಣತಿಯನ್ನು ಪೂರ್ಣ ಗೊಳಿಸಲಾಗಿದೆ. ಕನಿಷ್ಠ ಗಣತಿ ನಡೆದಿರುವುದು ಉಡುಪಿ ತಾಲೂಕಿನಲ್ಲಿ. ಇಲ್ಲಿ ಮಂಗಳವಾರ ಸಂಜೆಯವರೆಗೆ ನಿಗದಿತ ಗುರಿಯ ಅರ್ಧದಷ್ಟು ಮನೆಗಳ ಸಮೀಕ್ಷೆಯೂ ಮುಗಿದಿಲ್ಲ. ಉಡುಪಿ ತಾಲೂಕಿನ ಸಾಧನೆ ಕೇವಲ 40.7 ಮಾತ್ರ ಎಂದು ಜಿಲ್ಲಾಡಳಿತ ನೀಡಿರುವ ಮಾಹಿತಿ ತಿಳಿಸಿದೆ.

ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡು ಸಮೀಕ್ಷೆಗೆ ಬಾರದ ನಾಲ್ವರು ಶಿಕ್ಷಕರನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಈಗಾಗಲೇ ಅಮಾನತು ಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3231 ಮಂದಿ ಗಣತಿದಾರರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನದ ಗುರಿ 30,139 ಮನೆಗಳಾಗಿವೆ. ಮೊದಲ ನಾಲ್ಕು ದಿನ ಸೇರಿದಂತೆ ಗಣತಿ ಕಾರ್ಯ ವಿವಿಧ ಕಾರಣಗಳಿಂದ ನಡೆಯದ ಕಾರಣ ಗುರಿ ಮುಟ್ಟಲು ಇಂದು 1,16,646 ಮನೆಗಳ ಗಣತಿ ಮುಗಿಸಬೇಕಿತ್ತು.

ಮಂಗಳವಾರ ಸಂಜೆಯವರೆಗೆ ತಾಲೂಕುವಾರು ನಡೆದ ಸಮೀಕ್ಷೆಯ ಸಂಪೂರ್ಣ ವಿವರ ಹೀಗಿದೆ.

(ತಾಲೂಕು, ಒಟ್ಟು ಕುಟುಂಬಗಳು, ಬ್ಲಾಕ್‌ಗಳು, ಇಂದು ಪೂರ್ಣಗೊಂಡ ಮನೆ, ಸಮೀಕ್ಷೆ ಪೂರ್ಣಗೊಂಡ ಮನೆಗಳ ವಿವರ, ಶೇಕಡಾವಾರು)

ಬೈಂದೂರು 26,623 246 0730 22,791 85.6

ಹೆಬ್ರಿ 13,422 121 0203 10,744 80.0

ಬ್ರಹ್ಮಾವರ 51,775 465 0858 38,739 74.8

ಕುಂದಾಪುರ 66,678 621 2033 48,407 72.8

ಕಾರ್ಕಳ 58,634 531 1383 38,974 66.5

ಕಾಪು 46,286 403 1724 27,767 60.0

ಉಡುಪಿ 98,675 844 3420 40,133 40.7

ಒಟ್ಟು 362093 3231 10351 228157 63.0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News