×
Ad

ರೆಂಜಾಳ: ವಿದ್ಯಾಪೋಷಕ್‌ನ 69ನೇ ಮನೆ ಫಲಾನುಭವಿಗೆ ಹಸ್ತಾಂತರ

Update: 2025-04-30 20:37 IST

ಉಡುಪಿ, ಎ.30: ಯಕ್ಷಗಾನ ಕಲಾರಂಗ ಕಾರ್ಕಳ ತಾಲೂಕಿನ ರೆಂಜಾಳದ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಖಿತಾಳಿಗೆ ಭೀಮಾ ಗೋಲ್ಡ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ಮನೆ ’ಗೋಕುಲ’ದ ಉದ್ಘಾಟನೆ ಮಂಗಳವಾರ ಜರಗಿತು.

ಬೆಂಗಳೂರು ಭೀಮ ಗೋಲ್ಡ್‌ನ ಕ್ಲಸ್ಟರ್ ಹೆಡ್ ಕಾರ್ತಿಕ್ ರಾವ್ ಅವರು ಜ್ಯೋತಿ ಬೆಳಗಿಸಿ ಮನೆಯನ್ನು ಉದ್ಘಾಟಿಸಿದರು. ಯಕ್ಷಗಾನ ಕಲಾರಂಗ ಶಿಕ್ಷಣ ಮತ್ತು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಎಲ್ಲ ಸಂಘಟನೆಗಳಿಗೂ ಮಾದರಿ ಎಂದವರು ಈ ಸಂದರ್ಭದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಉಡುಪಿ ಭೀಮ ಗೋಲ್ಡ್‌ನ ಅಧಿಕಾರಿಗಳಾದ ಗುರುಪ್ರಸಾದ್ ರಾವ್, ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ವಿಟ್ಲದ ಅನಂತಕೃಷ್ಣ ಹೆಬ್ಬಾರ್ ಮಾತನಾಡಿ ವಿಟ್ಲದಲ್ಲಿ ತಾವೂ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಆರ್ಥಿಕ ನೆರವು ನೀಡಲು ಇದು ಪ್ರೇರಣೆ ಎಂದರು.

ರೆಂಜಾಳ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಶೆಟ್ಟಿ, ಸಾಮಾಜಿಕ ಸೇವಾಕರ್ತ ವಿಜಯ ಶೆಟ್ಟಿ, ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ರಾಜೇಶ್, ಸ್ಥಳೀಯರಾದ ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ಕೆ. ಸದಾಶಿವ ರಾವ್, ಯು. ಎಸ್.ರಾಜ ಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ಎಚ್.ಎನ್. ವೆಂಕಟೇಶ್, ಕಿಶೋರ್ ಕನ್ನರ್ಪಾಡಿ ಪಾಲ್ಗೊಂಡರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News