ಮನೆಗೆ ನುಗ್ಗಿ 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ಪ್ರಕರಣ ದಾಖಲು
Update: 2025-05-11 21:18 IST
ಸಾಂದರ್ಭಿಕ ಚಿತ್ರ
ಮಲ್ಪೆ, ಮೇ 11: ಪಡುತೋನ್ಸೆ ಗ್ರಾಮದ ಗುಳಿಬೆಟ್ಟು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮೇ 2ರ ಸಂಜೆಯಿಂದ ಮೇ 6ರ ಸಂಜೆಯ ಮಧ್ಯಾವಧಿಯಲ್ಲಿ ರಾಜು ಶೀನ ಎಂಬವರ ಮನೆಗೆ ನುಗ್ಗಿದ ಕಳ್ಳರು, ರೂಮ್‌ನ ಬೆಡ್ ಮೇಲೆ ಇಟ್ಟಿದ್ದ ಚಿನ್ನದ ನೆಕ್ಲೇಸ್, ಚಿನ್ನದ ಬಳೆಗಳು, ಚಿನ್ನದ ಚೈನ್, ಚಿನ್ನದ ಕಿವಿ ಓಲೆ, ಚಿನ್ನದ ಉಂಗುರ ಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 118 ಗ್ರಾಂ ತೂಕದ ಚಿನ್ನಾಭರಣಗಳ ಮೌಲ್ಯ 9.50ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.