×
Ad

ಎ.10ರಂದು ವಿಷುಕಣಿ-ಕವಿದನಿ ಬಹುಭಾಷಾ ಕವಿಗೋಷ್ಠಿ

Update: 2025-04-08 18:13 IST

ಮಣಿಪಾಲ, ಎ.8: ರೇಡಿಯೊ ಮಣಿಪಾಲ್ 90.4 ಎಂಎಚ್‌ಝೆಡ್ ಸಮುದಾಯ ಬಾನುಲಿ ಕೇಂದ್ರ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ವಿಷುಕಣಿ-ಕವಿದನಿ ಬಹುಭಾಷಾ ಕವಿಗೋಷ್ಠಿಯು ಎ.10ರಂದು ಮಧ್ಯಾಹ್ನ 2.30ಕ್ಕೆ ಮಣಿಪಾಲ ಎಂ.ಐ.ಸಿ ಕ್ಯಾಂಪಸ್‌ನಲ್ಲಿ ನಡೆಯಲಿದೆ

ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್‌ನ ನಿರ್ದೇಶಕಿ ಡಾ. ಶುಭ ಎಚ್.ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಕವಿಗಳಾದ ಕವಿತಾ ಎಸ್.ಮಣಿಪಾಲ(ಹವ್ಯಕ ಕನ್ನಡ), ವೈಷ್ಣವಿ ಸುಧೀಂದ್ರ ರಾವ್(ಕುಂದಾಪ್ರ ಕನ್ನಡ), ರಾಮಾಂಜಿ ಉಡುಪಿ(ಕನ್ನಡ), ಮಾಲತಿ ರಮೇಶ್ ಭಂಡಾರಿ ಕೆಮ್ಮಣ್ಣು (ತುಳು), ಕೆ.ವಾಣಿಶ್ರೀ ಅಶೋಕ್ ಐತಾಳ್(ತೆಲುಗು), ಪ್ರಣತಿ ಪಿ.ಭಟ್ ಮಣಿಪಾಲ(ಹಿಂದಿ), ವಿನೋದ ಪಡುಬಿದ್ರಿ(ತುಳು), ವಿಜಯಲಕ್ಷ್ಮೀ ಆರ್.ಕಾಮತ್(ಕೊಂಕಣಿ), ಮನೋಹರ ಶೆಟ್ಟಿ ಬಿಟ್ಕಲ್‌ಕಟ್ಟೆ (ತುಳು), ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ(ಮಲಯಾಳಂ), ವಸುಧಾ ಅಡಿಗ ನೀಲಾವರ(ಕನ್ನಡ), ಲಲಿತ ಪ್ರದೀಪ್ ಭಟ್(ಕನ್ನಡ), ಮಂಜುನಾಥ ಮರವಂತೆ(ಕುಂದಾಪ್ರ ಕನ್ನಡ), ವರುಣ್ ಎಂ.ಬಂಟಕಲ್(ಇಂಗ್ಲಿಷ್), ಸುಲೋಚನ ಪಚ್ಚಿನಡ್ಕ (ತುಳು), ನೀಮಾ ಲೋಬೊ ಶಂಕರಪುರ (ಕೊಂಕಣಿ) ಭಾಗವಹಿಸಲಿದ್ದಾರೆ ಎಂದು ರೇಡಿಯೊ ಮಣಿಪಾಲ್ ಇದರ ಸಹಾಯಕ ಪ್ರಾಧ್ಯಾಪಕಿ ಮತ್ತು ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News