ಜ12ರಂದು ವಿಚಾರಗೋಷ್ಠಿ -ಬಹುಮಾನ ವಿತರಣೆ
Update: 2024-01-10 19:26 IST
ಉಡುಪಿ, ಜ.10: ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ವತಿಯಿಂದ ಸುದೃಢ ಕುಟುಂಬ, ಸುಭದ್ರ ಸಮಾಜ ಎಂಬ ಶೀರ್ಷಿಕೆಯಡಿಯಲ್ಲಿ ವಿಚಾರಗೋಷ್ಠಿಯನ್ನು ಜ.12ರಂದು ಸಂಜೆ 6-30ಕ್ಕೆ ಉಡುಪಿಯ ಉಡುಪಿ ಚರ್ಚ್‌ನ ಡಾನ್ ಬಾಸ್ಕೋ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಮಣಿಪಾಲ ಪೋಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ, ಉಡುಪಿ ಸುಗಮ್ಯ ಮಹಿಳಾ ಸಂಘದ ಸ್ಥಾಪಕಧ್ಯಕ್ಷ ಜನೇಟ್ ಬರ್ಬೋಝ, ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋ ವೈದ್ಯ ಡಾ.ಮಾನಸ್ ಇ.ಆರ್. ಭಾಗವಹಿಸಲಿರುವರು ಎಂದು ಸಂಚಾಲಕ ರಯೀಸ್ ಅಹಮದ್ ಶೇಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.