ಭಟ್ಕಳ, ನ.13: ಭಟ್ಕಳ ಅಲ್ ಇಹ್ಸಾನ್ ಅಕಾಡೆಮಿ ವತಿಯಿಂದ ವಿಶೇಷ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ನ.15ರಂದು ಅಸರ್ ನಮಾಝ್ ನಂತರ ನವಾಯತ್ ಕಾಲೋನಿಯ ಖುಷ್ಹಾಲ್ ಶಾದಿ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕುಲ್ಲಿಯತುಲ್ ಹದೀಸ್‌ನ ಪ್ರಾಧ್ಯಾಪಕ ಶೈಖ್ ಹಾಫಿಝ್ ಅಬ್ದುಲ್ ಹಸೀಬ್ ಉಮರಿ ಮದನಿ, ಇಸ್ಲಾಮಿ ತರ್ಬಿಯತ್ ಕೆ ರಹನುಮಾ ಉಸೂಲ್ ಎಂಬ ವಿಷಯದ ಕುರಿತು ಪ್ರವಚನ ನೀಡಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor