×
Ad

ಮಾನಸಿಕ ಅಸ್ವಸ್ಥ ಯುವತಿಯನ್ನು ಸ್ವೀಕರಿಸಲು ಒಪ್ಪದ ಕುಟುಂಬ!

Update: 2023-08-07 20:25 IST

ಉಡುಪಿ, ಆ.೭: ಮಾನಸಿಕ ಅಸ್ವಸ್ಥೆಯಿಂದ ರಸ್ತೆ ಬದಿ ತಿರುಗಾಡುತ್ತಿದ್ದ ಕೇರಳ ಮೂಲದ ಯುವತಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿದರೂ ಇದೀಗ ಆಕೆಯ ಮನೆಯವರು ಆಕೆಯನ್ನು ಸ್ವೀಕರಿಸಲು ಒಪ್ಪದಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ.

ಯುವತಿಯನ್ನು ಕೇರಳದ ತ್ರಿಶುರಿನ ಅಬ್ದುಲ್ ಕರೀಂ ಎಂಬವರ ಮಗಳು ಆಯೇಷಾ ಬಾನು (30) ಎಂದು ಗುರುತಿಸಲಾಗಿದೆ. ತಿಂಗಳ ಹಿಂದೆ ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಅತಿರೇಕವಾಗಿ ವರ್ತಿಸುತ್ತಿದ್ದ ಕೇರಳ ಮೂಲದ ಯುವತಿಯನ್ನು ಮಣಿಪಾಲ ಪೊಲೀಸರ ಮನವಿ ಮೇರೆಗೆ ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ಯುವತಿ, ತನ್ನ ಕುಟುಂಬದವರ ಬಗ್ಗೆ ಮಾಹಿತಿ ನೀಡಿದರು.

ಅದರಂತೆ ಆಕೆಯ ತಾಯಿ ಹಾಗೂ ಸಹೋದರನ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಯುವತಿಯನ್ನು ಸ್ವೀಕರಿಸಲು ಒಪ್ಪುತ್ತಿಲ್ಲ. ಆದುದರಿಂದ ಯುವತಿಯ ಹಿತದೃಷ್ಟಿ ಯಿಂದ ಸಂಬಂಧಪಟ್ಟ ಇಲಾಖೆಗಳು ಯುವತಿಯ ಸಂಬಂಧಿಕರ ಮನವೊಲಿಸ ಬೇಕು. ಇಲ್ಲವೇ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News