×
Ad

ಅಡ್ಡೂರು ಮಿನಿ ಪಾಕಿಸ್ತಾನ ಹೇಳಿಕೆ: ಶಾಸಕ ಭರತ್ ಶೆಟ್ಟಿ ವಿರುದ್ಧ ಪ್ರತಿಭಟನೆ, ದೂರು ದಾಖಲು

Update: 2024-08-23 22:29 IST

ಕೈಕಂಬ: ಶಾಸಕ ಭರತ್‌ ಶೆಟ್ಟಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಅಡ್ಡೂರು ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿ ನೀಡಿರುವ ಹೇಳಿಕೆಯನ್ನು ಖಂಡಿಸಿ, ಅವರ ವಿರುದ್ಧ ಯುಎಪಿಎ ಅಡಿ ದೇಶ ದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಎಸ್ಡಿಪಿಐ ಗುರುಪುರ ಬ್ಲಾಕ್‌ ವತಿಯಿಂದ ಕೈಕಂಬ ಜಂಕ್ಷನ್‌ ನಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್‌ ಕಡಂಬು, ಸ್ವಾತಂತ್ರ ಸಂಗ್ರಾಮದ ಸಂದರ್ಭ ಬ್ರಿಟೀಷರ ಬೂಟು ನೆಕ್ಕಿದ್ದ ಸಾವರ್ಕರ್‌ ಹಿಂಬಾಲಕನ ಈ ಹೇಳಿಕೆಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಆದರೂ, ದೇಶದಲ್ಲಿದ್ದುಕೊಂಡು ದೇಶದ ಮಣ್ಣನ್ನು ಪಾಕಿಸ್ತಾನಕ್ಕೆ ಹೋಲಿಸಿರುವ ಶಾಸಕನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.

ಪ್ರತಿಭಟನೆಗೂ ಮುನ್ನ ಶಾಸಕ ಭರತ್‌ ಶೆಟ್ಟಿ ಅವರ ಹೇಳಿಕೆಯನ್ನು ಖಂಡಿಸಿ ಬಜ್ಪೆ ಪೊಲೀಸರಿಗೆ ದೂರು ನೀಡಲಾಯಿತು.

ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಬ್ಲಾಕ್‌ ಕಾರ್ಯದರ್ಶಿ ಇರ್ಷಾದ್ ಅಡ್ಡೂರು, ಬ್ಲಾಕ್ ಉಪಾಧ್ಯಕ್ಷರಾದ ಅಶ್ರಫ್ ನಡುಗುಡ್ಡೆ, ಬ್ಲಾಕ್ ಕೋಶಾಧಿಕಾರಿ ಝುಬೈರ್ ಮಳಲಿ, ಇಮ್ತಿಯಾಝ್ ಅಡ್ಡೂರು, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಶಾಹಿಕ್ ಪಾಂಡೆಲ್, ಮನ್ಸೂರ್ ಟಿಬೇಟ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News