×
Ad

ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಧೀನದ ಮದ್ರಸಗಳ ವಾರ್ಷಿಕ ಪರೀಕ್ಷೆ ಆರಂಭ: ಎಂ.ಕೆ.ಅಬ್ದುಲ್‌ ರಶೀದ್ ಸಖಾಫಿ

Update: 2025-02-20 08:30 IST

ಉಡುಪಿ: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಇದರ ಅಧೀನದಲ್ಲಿರುವ ಮದ್ರಸ ಗಳಿಗೆ ವಾರ್ಷಿಕ ಪರೀಕ್ಷೆ ಪ್ರಾರಂಭ ವಾಗಿದ್ದು. ಈಗಾಗಲೇ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷೆಗಳು ಪೂರ್ಣಗೊಂಡಿವೆ. ಬಾಕಿ ತರಗತಿಗಳ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವಕ್ತಾರ ಎಂ.ಕೆ.ಅಬ್ದುಲ್‌ ರಶೀದ್ ಸಖಾಫಿ ಮಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ದೆಹಲಿ ದರಿಯಗಂಜ್ ಕಛೇರಿ ಯನ್ನು ಕೇಂದ್ರೀಕರಿಸಿ ಉತ್ತರ ಭಾರತದಲ್ಲಿಯೂ ಕಲ್ಲಿಕೋಟೆ ಸಮಸ್ತ ಸೇಂಟರ್ ನ್ನು ಕೇಂದ್ರೀಕರಿಸಿ ಹಲವಾರು ರಾಜ್ಯಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬೋರ್ಡ್ ನ ಅಧೀನದಲ್ಲಿರುವ ಸುಮಾರು ಹತ್ತು ಸಾವಿರ ಕ್ಕಿಂತ ಹೆಚ್ಚು ಮದ್ರಸ ಗಳಿಗೆ ಏಕ ಕಾಲದಲ್ಲಿ ಪರೀಕ್ಷೆ ನಡೆಯುತ್ತಿದೆ. 1951 ರಲ್ಲಿಯೇ ಮದ್ರಸ ಶಿಕ್ಷಣವು ತರಗತಿ , ಸಿಲೆಬಸ್ ನಿಂದ ಮುಂದುವರೆದು ಕಾಲಾನುಕ್ರಮದಲ್ಲಿ ಉತ್ತಮ ಪ್ರಗತಿಯನ್ನು ಕಂಡಿದೆ.

ಪ್ರತೀ ಮದ್ರಸ ಗಳ ಅಧ್ಯಾಪಕರ, ಮ್ಯಾನೇಜ್ಮೆಂಟ್ ರವರ ಹಾಗೂ ಸುನ್ನೀ ಅಧ್ಯಾಪಕರ ಒಕ್ಕೂಟದ ರೇಂಜ್, ಜಿಲ್ಲೆ, ರಾಜ್ಯ ಸಮಿತಿ ಗಳ ಕ್ಲಪ್ತತೆಯು ಅಧ್ಯಯನದ, ಪರೀಕ್ಷೆಯ ಯಶಸ್ವಿಗೆ ಕಾರಣ ಎಂದು ಕರ್ನಾಟಕ ರಾಜ್ಯ ವಕ್ತಾರ ಎಂ.ಕೆ.ಅಬ್ದುರ್ರಶೀದ್ ಸಖಾಫಿ ಮಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News